
ಗೌರಿ-ಗಣೇಶ, ಈದ್ ಮಿಲಾದ್ ಹಬ್ಬ : ಶಿವಮೊಗ್ಗ ರೌಡಿಗಳಿಗೆ ಪೊಲೀಸರ ಖಡಕ್ ವಾರ್ನಿಂಗ್!
ಶಿವಮೊಗ್ಗ, ಆ. 10: ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ (gowri ganesha and eid milad festival) ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು, ರೌಡಿ ಶೀಟರ್ ಗಳ (rowdy sheeters) ಪರೇಡ್ ನಡೆಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಆ. 9 ರಂದು ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ (shimoga dar ground) ಪರೇಡ್ ನಡೆಸಲಾಗಿದ್ದು, 110 ಜನ ರೌಡಿಗಳು (rowdies) ಹಾಜರಿದ್ದರು. ಜಿಲ್ಲಾ ರಕ್ಷಣಾಧಿಕಾರಿ (sp) ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ (asp) ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ (dysp) ಸುರೇಶ್, ಬಾಬು ಅಂಜನಪ್ಪ ಉಪಸ್ಥಿತರಿದ್ದರು.
ಸೂಚನೆ : ವಾರದಲ್ಲಿ ಎರಡು ಬಾರಿ ಸಂಬಂಧಿಸಿದ ಪೊಲೀಸ್ ಠಾಣೆಗೆ (police station) ಕಡ್ಡಾಯವಾಗಿ ಹಾಜರಾಗಬೇಕು. ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದ್ದು, ಯಾವುದಾದರು ಕಾನೂನುಬಾಹಿರ ಕೃತ್ಯಗಳಲ್ಲಿ (criminal activities) ಭಾಗಿಯಾಗಿದ್ದು ಕಂಡುಬಂದರೆ ಗಡಿಪಾರುಗೊಳಿಸುವುದು, ಗೂಂಡಾ ಕಾಯ್ದೆಯಡಿ (goonda act) ಕೇಸ್ ದಾಖಲಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ (police warrning) ನೀಡಿದ್ದಾರೆ.
ಸಹಚರರ ಜೊತೆಗೆ ಗುಂಪುಗೂಡುವುದು, ರಾತ್ರಿ ವೇಳೆ ಅನಾವಶ್ಯಕವಾಗಿ ಸುತ್ತಾಡುವುದು ಕಂಡುಬಂದಲ್ಲಿ ಕ್ರಮ ಜರುಗಿಸಲಾಗುವುದು. ಆದಾಯದ ಮೂಲಗಳ ವಿವರ ಸಂಗ್ರಹಿಸಲಾಗುವುದು. ಹೇರ್ ಕಟ್ಟಿಂಗ್, ಶೇವಿಂಗ್ ಮಾಡಿಸಿಕೊಂಡು ಶಿಸ್ತಾಗಿ ಇರಬೇಕು ಎಂದು ರೌಡಿಗಳಿಗೆ ತಾಕೀತು ಮಾಡಲಾಗಿದೆ.
ಕಾನೂನುಗಳನ್ನು ಗೌರವಿಸಿ ಪಾಲಿಸಿ. ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಿ. ಇದಕ್ಕೆ ಪೊಲೀಸ್ ಇಲಾಖೆಯಿಂದ (police dept) ನೆರವು ನೀಡಲಾಗುವುದು. ಒಂದು ವೇಳೆ ಸಮಾಜದ ಶಾಂತಿ – ಸುವ್ಯವಸ್ಥೆಗೆ ಭಂಗ ತರುವ ಕೃತ್ಯಗಳಲ್ಲಿ (rowdyism) ಭಾಗಿಯಾದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಖಡಕ್ ವಾರ್ನಿಂಗ್ ನೀಡಿದೆ.