
ಅನಾಥ ಶವಗಳ ಅಂತ್ಯ ಸಂಸ್ಕಾರದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ತಂದೆ – ಮಗಳಿಗೆ ಸನ್ಮಾನ
ಶಿವಮೊಗ್ಗ (shivamogga), ಆ. 10: ಅನಾಥ ಶವಗಳ ಅಂತ್ಯ ಸಂಸ್ಕಾರ ನಡೆಸುವ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ತಂದೆ ಹಾಗೂ ಮಗಳಿಗೆ (father and daughter), ಜಿಲ್ಲಾ ರಕ್ಷಣಾಧಿಕಾರಿ (sp) ಜಿ.ಕೆ.ಮಿಥುನ್ ಕುಮಾರ್ ಅವರು ಸನ್ಮಾನಿಸಿ ಅಭಿನಂದಿಸಿದ್ದಾರೆ.
ಗಾಡಿಕೊಪ್ಪದ ನಿವಾಸಿಗಳಾದ ರವಿ ಎಸ್ ಹಾಗೂ ಅವರ ಪುತ್ರಿ ಧನುಶ್ರೀ ಎಂಬುವರೇ, ಅನಾಥ ಶವಗಳ ಅಂತ್ಯ ಸಂಸ್ಕಾರ ನಡೆಸಿಕೊಂಡು ಬರುತ್ತಿರುವವರಾಗಿದ್ದಾರೆ. ಇವರ ನಿಸ್ವಾರ್ಥ ಸೇವಾ ಕಾರ್ಯ ಮೆಚ್ಚಿ, ಎಸ್ಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಗಿದೆ.
2005 ನೇ ಸಾಲಿನಿಂದಲೂ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಅನಾಥ ಶವಗಳು ಕಂಡುಬಂದ ವೇಳೆ, ಶವಗಳ ಸಾಗಾಣೆ (transportation of dead bodies) ಮಾಡುವುದರ ಜೊತೆಗೆ, ಅಂತ್ಯ ಸಂಸ್ಕಾರ (last rites) ನೆರವೇರಿಸಲು ಪೊಲೀಸ್ ಇಲಾಖೆಗೆ ತಂದೆ – ಮಗಳು ನೆರವಾಗುತ್ತಾ ಬಂದಿದ್ದಾರೆ ಎಂದು ಪೊಲೀಸ್ ಇಲಾಖೆ (police dept) ತಿಳಿಸಿದೆ.
ಸನ್ಮಾನದ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (asp) ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿಗಳಾದ (dysp) ಬಾಬು ಆಂಜನಪ್ಪ, ಸುರೇಶ್ ಎಂ ಉಪಸ್ಥಿತರಿದ್ದರು.
More Stories
shimoga | ಮಹಿಳಾ ಅಧಿಕಾರಿ ಪ್ರಕರಣದ ನಂತರ ಅಕ್ರಮ ಮರಳು ಲೂಟಿಗೆ ಬ್ರೇಕ್ : ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ಆಡಳಿತ?
shimoga | A temporary break in illegal sand looting after the case of the female officer: Does the administration need to wake up?
shimoga | ಮಹಿಳಾ ಅಧಿಕಾರಿ ಪ್ರಕರಣದ ನಂತರಕ ಅಕ್ರಮ ಮರಳು ಲೂಟಿಗೆ ತಾತ್ಕಾಲಿಕ ಬ್ರೇಕ್ : ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ಆಡಳಿತ?