Installation of Public Ganesha Murti : Bhadravati Special Meeting by Sagar Police ಸಾರ್ವಜನಿಕ ಗಣೇಶಮೂರ್ತಿ ಪ್ರತಿಷ್ಠಾಪನೆ : ಭದ್ರಾವತಿ, ಸಾಗರ ಪೊಲೀಸರಿಂದ ವಿಶೇಷ ಸಭೆ

ಸಾರ್ವಜನಿಕ ಗಣೇಶಮೂರ್ತಿ ಪ್ರತಿಷ್ಠಾಪನೆ : ಭದ್ರಾವತಿ, ಸಾಗರ ಪೊಲೀಸರಿಂದ ವಿಶೇಷ ಸಭೆ

ಶಿವಮೊಗ್ಗ (shivamogga), ಆ. 11: ಮುಂಬರುವ ಗೌರಿ-ಗಣೇಶ ಹಬ್ಬದ (gowri ganesha festival 2024) ಹಿನ್ನೆಲೆಯಲ್ಲಿ, ಭದ್ರಾವತಿ ಹಾಗೂ ಸಾಗರ ಉಪ ವಿಭಾಗ ಪೊಲೀಸರು ಆಯಾ ಡಿವೈಎಸ್ಪಿ (dysp) ಗಳ ನೇತೃತ್ವದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಿರುವ ಸಮಿತಿಗಳ (ganeshotsav committees) ಸದಸ್ಯರ ಸಭೆ ನಡೆಸಿದರು.

ಭದ್ರಾವತಿಯಲ್ಲಿ (bhadravati) ನಡೆದ ಸಭೆಯು ಡಿವೈಎಸ್ಪಿ ನಾಗರಾಜ್ ಹಾಗೂ ಸಾಗರದಲ್ಲಿ (sagar) ನಡೆದ ಸಭೆಯು ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯ್ಕ್ ಅಧ್ಯಕ್ಷತೆಯಲ್ಲಿ ಜರುಗಿತು. ಸದರಿ ಸಭೆಗಳು ಆ. 9 ರಂದು ನಡೆದಿವೆ.

ಸಾವರ್ಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡುವ ವೇಳೆ ಅನುಸರಿಸಬೇಕಾದ ಕ್ರಮಗಳ ಕುರಿತಂತೆ, ಸಮಿತಿಗಳಿಗೆ ಸಲಹೆ – ಸೂಚನೆ ನೀಡಲಾಗಿದೆ. ವಿವರಗಳು ಮುಂದಿನಂತಿದೆ.

ಸಲಹೆಗಳು : ಪರಿಸರ ಸಂರಕ್ಷಣೆ ದೃಷ್ಠಿಯಿಂದ ಪಿಒಪಿಯಿಂದ (pop ganesha idol) ತಯಾರಿಸಿದ ಗಣಪತಿ ಮೂರ್ತಿಗಳ ಬದಲಾಗಿ, ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ (eco-friendly Ganpati idols) ಪ್ರತಿಷ್ಠಾಪನೆ ಮಾಡಬೇಕು.

ಗಣಪತಿ ಮೂರ್ತಿ ಪ್ರತಿಷ್ಠಾಪಿಸುವವರು ಮುಂಚಿತವಾಗಿ ಪ್ರತಿಷ್ಠಾಪನೆ ದಿನಾಂಕ, ಪೆಂಡಾಲ್ ಸ್ಥಳ, ವಿಸರ್ಜನಾ ಪೂರ್ವ ಮೆರವಣಿಗೆ (procession) ಮಾರ್ಗ ಮತ್ತು ವಿಸರ್ಜನಾ ಸ್ಥಳದ ಮಾಹಿತಿಯನ್ನು ಮುಂಚಿತವಾಗಿಯೇ ಪೊಲೀಸ್ ಠಾಣೆಗೆ ನೀಡಬೇಕು.  

ಗಣಪತಿ ಪೆಂಡಾಲ್ ಗಳಲ್ಲಿ ಸ್ವಯಂ ಸೇವಕರನ್ನು (volunteers) ನೇಮಿಸಬೇಕು. ಅವರು ದಿನದ 24  ಗಂಟೆಯೂ ಪೆಂಡಾಲ್ ನಲ್ಲಿರುವ ಹಾಗೇ ನೋಡಿಕೊಳ್ಳಬೇಕು. ಸ್ವಯಂ ಸೇವಕರ ಮಾಹಿತಿಯನ್ನು ಮುಂಚಿತವಾಗಿ ಪೊಲೀಸ್ ಠಾಣೆಗೆ (police station) ನೀಡಬೇಕು.

ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಯು, ಕಳೆದ ಬಾರಿ ಮಾಡಿದ ಮಾರ್ಗದಲ್ಲಿಯೇ ನಡೆಸಬೇಕು. ಯಾವುದೇ ಕಾರಣಕ್ಕೂ ಮಾರ್ಗ ಬದಲಾವಣೆ ಮಾಡಬಾರದು. ಗಣೇಶ ಹಬ್ಬದ ಫ್ಲೆಕ್ಸ್ ಮತ್ತು ಬ್ಯಾನರ್ ಹಾಕುವಾಗ ಇತರ ಸಾರ್ವಜನಿಕರ ಭಾವನೆಗಳಿಗೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕು.

ಗೌರಿ ಗಣೇಶ ಹಬ್ಬದ ಆಚರಣೆ ವೇಳೆಯಲ್ಲಿ ಧ್ವನಿ ವರ್ಧಕ ಬಳಕೆ (mike set sound) ಮಾಡುವಾಗ, ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು, ನಿಗದಿತ ಶಬ್ದ ಮಿತಿಯಲ್ಲಿಯೇ ಧ್ವನಿವರ್ಧಕ ಬಳಸಬೇಕು.

ಗಣಪತಿ ವಿಸರ್ಜನೆ ಮಾಡುವಾಗ ಎಲ್ಲಾ ಮುಂಜಾಗ್ರತಾ ಕ್ರಮ (precautionary measure) ಪಾಲಿಸಬೇಕು ಎಂದು ಗಣಪತಿ ಪ್ರತಿಷ್ಠಾಪನಾ ಸಮಿತಿ ಸದಸ್ಯರಿಗೆ ಪೊಲೀಸರು (police) ಸೂಚನೆ ನೀಡಿದ್ದಾರೆ.

Tribute to father and daughter who are doing selfless service of cremation of orphans ಅನಾಥ ಶವಗಳ ಅಂತ್ಯ ಸಂಸ್ಕಾರದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ತಂದೆ – ಮಗಳಿಗೆ ಸನ್ಮಾನ Previous post ಅನಾಥ ಶವಗಳ ಅಂತ್ಯ ಸಂಸ್ಕಾರದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ತಂದೆ – ಮಗಳಿಗೆ ಸನ್ಮಾನ
Broken gate : Heavy water out of Tungabhadra Reservoir! ತುಂಡರಿಸಿದ ಗೇಟ್ : ತುಂಗಾಭದ್ರಾ ಜಲಾಶಯದಿಂದ ಭಾರೀ ನೀರು ಹೊರಕ್ಕೆ! Next post ತುಂಡರಿಸಿದ ಗೇಟ್ : ತುಂಗಭದ್ರಾ ಜಲಾಶಯದಿಂದ ಭಾರೀ ನೀರು ಹೊರಕ್ಕೆ!