
ತುಂಡರಿಸಿದ ಗೇಟ್ : ತುಂಗಭದ್ರಾ ಜಲಾಶಯದಿಂದ ಭಾರೀ ನೀರು ಹೊರಕ್ಕೆ!
ಹೊಸಪೇಟೆ (hospet), ಆ. 11: ತುಂಗಭದ್ರಾ ಜಲಾಶಯದ (tungabhadra dam) 19 ನೇ ಗೇಟ್ ಚೈನ್ ಲಿಂಕ್ ಶನಿವಾರ ತಡರಾತ್ರಿ ತುಂಡರಿಸಿದ ಹಿನ್ನೆಲೆಯಲ್ಲಿ, ಭಾನುವಾರ 33 ಕ್ರಸ್ಟ್ ಗೇಟ್ ಗಳ ಮೂಲಕ 1 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಸದ್ಯ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದೆ. ಹೊಸ ಗೇಟ್ ಸಿದ್ದಪಡಿಸಲಾಗುತ್ತಿದೆ. ದುರಸ್ತಿ ಕಾರ್ಯಕ್ಕೆ ಡ್ಯಾಂನಲ್ಲಿನ ಸುಮಾರು 60 ಟಿಎಂಸಿಯಷ್ಟು (tmc) ನೀರು ಕಡಿಮೆ ಮಾಡಬೇಕು. ಅಂದರೆ 20 ಅಡಿಯಷ್ಟು ನೀರು ಕಡಿಮೆಯಾಗಬೇಕಾಗಿದೆ.
ಪ್ರತಿದಿನ 2 ಲಕ್ಷ ಕ್ಯೂಸೆಕ್ (cusec) ನೀರನ್ನು ನಾಲ್ಕು ದಿನಗಳ ಕಾಲ ಹೊರಹರಿಸಿದರೆ, ದುರಸ್ತಿ ಕಾರ್ಯ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ತಜ್ಞರ ತಂಡ ಅಭಿಪ್ರಾಯಪಟ್ಟಿದೆ ಎಂದು ಹೇಳಲಾಗಿದೆ.
ತುಂಗಭದ್ರಾ ಜಲಾಶಯದ (tungabhadra reservoir) 69 ವರ್ಷಗಳ ಇತಿಹಾಸದಲ್ಲಿ, ಇದೇ ಮೊದಲ ಬಾರಿಗೆ ಈ ರೀತಿಯ ಅವಘಡವೊಂದು ನಡೆದಿದೆ. ಪ್ರಸ್ತುತ ವರ್ಷ ಮಲೆನಾಡು (malnad) ಭಾಗದಲ್ಲಿ ಬಿದ್ದ ಭಾರೀ ಮಳೆಗೆ (heavy rainfall), ತುಂಗಭದ್ರಾ ಜಲಾಶಯವು ನಿಗದಿತ ಅವಧಿಗಿಂತ ಮುನ್ನವೇ ಭರ್ತಿಯಾಗಿತ್ತು.
ಚೈನ್ ಲಿಂಕ್ (crest gate chain link) ತುಂಡರಿಸಿರುವ ಗೇಟ್ ನಂಬರ್ 19 ರ ಮೇಲೆ ಒತ್ತಡ ಹೆಚ್ಚಾಗಿದ್ದು, ಈ ಒಂದು ಗೇಟ್‌ನಿಂದಲೇ 35 ಸಾವಿರ ಕ್ಯುಸೆಕ್ ಗೂ ಅಧಿಕ ನೀರು ನದಿಗೆ ಹೋಗುತ್ತಿದೆ. ಗೇಟ್ (crest gate) ಮುರಿದಿರುವ ಪರಿಣಾಮ ಭಾನುವಾರ ಡ್ಯಾಂಗೆ ಜನರ ಭೇಟಿಯನ್ನು ನಿಷೇಧಿಸಲಾಗಿದೆ. ಹೈದರಾಬಾದ್, ಚೆನ್ನೈ, ಮುಂಬೈನಿಂದ ತಜ್ಞರ ತಂಡ ಡ್ಯಾಂಗೆ ಆಗಮಿಸಿದೆ. ದುರಸ್ತಿ ಕಾರ್ಯವನ್ನು ಕೈಗೊಳ್ಳುವ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಜಲಾಶಯದ ಒಳಹರಿವು ಕುಸಿದ ಕಾರಣದಿಂದ ಶುಕ್ರವಾರವಷ್ಟೆ ಡ್ಯಾಂ ನೀರಿನ ಮಟ್ಟ ಕಾಯ್ದುಕೊಂಡು, 9 ಗೇಟ್ ಗಳ ಮೂಲಕ 28 ಸಾವಿರ ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿತ್ತು. 105. 78 ಅಡಿ ಟಿಎಂಸಿ ನೀರು ಸಂಗ್ರಹವಾಗಿದೆ.