decreasing monsoon rains in western ghat : heavy fall in the inflow of tunga bhadra linganamakki reservoirs! ಮಲೆನಾಡಲ್ಲಿ ಇಳಿಮುಖವಾದ ಮುಂಗಾರು ಮಳೆ : ತುಂಗಾ ಭದ್ರಾ ಲಿಂಗನಮಕ್ಕಿ ಜಲಾಶಯಗಳ ಒಳಹರಿವಿನಲ್ಲಿ ಭಾರೀ ಕುಸಿತ!

ಮಲೆನಾಡಲ್ಲಿ ಇಳಿಮುಖವಾದ ಮುಂಗಾರು ಮಳೆ : ತುಂಗಾ, ಭದ್ರಾ, ಲಿಂಗನಮಕ್ಕಿ ಜಲಾಶಯಗಳ ಒಳಹರಿವಿನಲ್ಲಿ ಭಾರೀ ಕುಸಿತ!

ಶಿವಮೊಗ್ಗ (shivamogga), ಆ. 12: ಮಲೆನಾಡಲ್ಲಿ (malnad) ಮುಂಗಾರು ಮಳೆಯ (monsoon rain) ಆರ್ಭಟ ಸಂಪೂರ್ಣ ಕಡಿಮೆಯಾಗಿದೆ. ಉಕ್ಕಿ ಹರಿಯುತ್ತಿದ್ದ ನದಿ, ಹಳ್ಳಕೊಳ್ಳ, ಕೆರೆಕಟ್ಟೆಗಳು ಸಹಜ ಸ್ಥಿತಿಗೆ ಮರಳಿವೆ. ಇದರಿಂದ ಜಲಾಶಯಗಳ (reservoirs) ಒಳಹರಿವಿನಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ. ಈ ನಡುವೆ ತಾಪಮಾನದ (temperature) ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.

ಆಗಸ್ಟ್ 12 ರ ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ( western ghats ) ಬಿದ್ದ ಮಳೆ (rainfall) ವಿವರ ಈ ಮುಂದಿನಂತಿದೆ.

ಮಾಣಿ (mani) 2 ಮಿಲಿ ಮೀಟರ್, ಯಡೂರು (yadur) 0. 00 ಮಿ.ಮೀ., ಹುಲಿಕಲ್ (hulikallu) 2 ಮಿ.ಮೀ., ಮಾಸ್ತಿಕಟ್ಟೆ (masthikatte) 0. 00 ಮಿ.ಮೀ., ಚಕ್ರಾ (chakra) 1 ಮಿ.ಮೀ. ಹಾಗೂ ಸಾವೇಹಕ್ಲುವಿಲ್ಲಿ (savehakklu) 0. 00 ಮಿ.ಮೀ. ಮಳೆಯಾಗಿದೆ. ಆದರೆ ಸದರಿ ಪ್ರದೇಶಗಳಲ್ಲಿ, ಜುಲೈ ತಿಂಗಳ ಅಂತ್ಯದ ವಾರದಲ್ಲಿ ಪ್ರತಿದಿನ 200 ರಿಂದ 300 ಮಿ.ಮೀ. ವರ್ಷಧಾರೆಯಾಗುತ್ತಿತ್ತು (rain).

ಡ್ಯಾಂ ವಿವರ : ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ (catchment areas) ಮಳೆಯ ಪ್ರಮಾಣ (heavy rainfall) ತಗ್ಗಿರುವುದರಿಂದ ಲಿಂಗನಮಕ್ಕಿ, ತುಂಗಾ, ಭದ್ರಾ ಜಲಾಶಯಗಳ ಒಳಹರಿವಿನಲ್ಲಿ (inflow) ಗಣನೀಯ ಕುಸಿತ ಕಂಡುಬಂದಿದೆ.

ಸೋಮವಾರ ಬೆಳಿಗ್ಗೆಯ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂ ( linganamakki dam ) ಒಳಹರಿವು 7713 ಕ್ಯೂಸೆಕ್ ಇದೆ. 7610 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಡ್ಯಾಂ ನೀರಿನ ಮಟ್ಟ 1816. 65 (ಗರಿಷ್ಠ ಮಟ್ಟ : 1819) ಅಡಿಯಿದೆ.

ಶಿವಮೊಗ್ಗ – ದಾವಣಗೆರೆ (shimoga – davanagere) ಜಿಲ್ಲೆಗಳ ರೈತರ ಜೀವನಾಡಿ ಎಂದೇ ಕರೆಯಲಾಗುವ, ಮಧ್ಯ ಕರ್ನಾಟಕದ ಪ್ರಮುಖ ಜಲಾಶಯ ಭದ್ರಾ ( bhadra dam ) ಒಳಹರಿವು 7683 ಕ್ಯೂಸೆಕ್ ಇದೆ. ಆದರೆ 8841 ಕ್ಯೂಸೆಕ್ ನೀರನ್ನು ಡ್ಯಾಂನಿಂದ ಹೊರ ಹರಿಸಲಾಗುತ್ತಿದೆ (outflow). ಡ್ಯಾಂ ನೀರಿನ ಮಟ್ಟ 180. 3 (ಗರಿಷ್ಠ ಮಟ್ಟ : 186) ಅಡಿಯಿದೆ.

ಉಳಿದಂತೆ ತುಂಗಾ ಜಲಾಶಯದ ( tunga dam ) ಒಳಹರಿವಿನಲ್ಲಿಯೂ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ. ಸದ್ಯ 11 ಸಾವಿರ ಕ್ಯೂಸೆಕ್ ಒಳಹರಿವಿದ್ದು (inflow), ಸುಮಾರು 7500 ಕ್ಯೂಸೆಕ್ ನೀರನ್ನು ( tungabhadra dam ) ಹೊರ ಹರಿಸಲಾಗುತ್ತಿದೆ (out flow).

1. 50 Lakh cusec water out of Tungabhadra Reservoir : Flood threat! ತುಂಗಭದ್ರಾ ಜಲಾಶಯದಿಂದ 1. 50 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ : ಪ್ರವಾಹ ಭೀತಿ! Previous post ತುಂಗಭದ್ರಾ ಜಲಾಶಯದಿಂದ 1.50 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ : ಪ್ರವಾಹ ಭೀತಿ!
Kumar Bangarappa in the team of BJP rebel leaders: Shivamogga Kamala politics that has made interesting! ಬಿಜೆಪಿ ಬಂಡಾಯ ನಾಯಕರ ಟೀಂನಲ್ಲಿ ಕುಮಾರ್ ಬಂಗಾರಪ್ಪ : ಕುತೂಹಲ ಮೂಡಿಸಿದ ಶಿವಮೊಗ್ಗ ಕಮಲ ಪಾಲಿಟಿಕ್ಸ್! ವರದಿ : ಬಿ. ರೇಣುಕೇಶ್ b renukesha Next post ಬಿಜೆಪಿ ಬಂಡಾಯ ನಾಯಕರ ಟೀಂನಲ್ಲಿ ಕುಮಾರ್ ಬಂಗಾರಪ್ಪ : ಕುತೂಹಲ ಮೂಡಿಸಿದ ನಡೆ!