
ಬಿಜೆಪಿ ಬಂಡಾಯ ನಾಯಕರ ಟೀಂನಲ್ಲಿ ಕುಮಾರ್ ಬಂಗಾರಪ್ಪ : ಕುತೂಹಲ ಮೂಡಿಸಿದ ನಡೆ!
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಆ. 12: ಮಾಜಿ ಸಚಿವ – ಸೊರಬ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕುಮಾರ್ ಬಂಗಾರಪ್ಪ (kumar bangarappa) ಅವರು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ವಿರುದ್ದ ಮುನಿಸಿಕೊಂಡಿರುವ, ಬಿಜೆಪಿ ಬಂಡಾಯ ನಾಯಕರ ಟೀಂನಲ್ಲಿ (bjp rebel leaders team) ಗುರುತಿಸಿಕೊಂಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ!
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (bjp state president b y vijayendra) ನಾಯಕತ್ವ ಒಪ್ಪದಿರುವ ಕೆಲ ಘಟಾನುಘಟಿ ನಾಯಕರು, ಭಾನುವಾರ ಬೆಳಗಾವಿಯಲ್ಲಿ (belagavi) ನಡೆಸಿದ ಗೌಪ್ಯ ಸಭೆಯಲ್ಲಿ ಕುಮಾರ್ ಬಂಗಾರಪ್ಪ ಭಾಗಿಯಾಗಿದ್ದಾರೆ. ಇದು ಶಿವಮೊಗ್ಗ (shimoga) ಜಿಲ್ಲೆಯ ಕಮಲ (bjp) ಪಾಳೇಯದಲ್ಲಿ ಬಿಸಿ ಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಸದರಿ ಸಭೆಯಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ (basanagouda patil yatnal), ರಮೇಶ್ ಜಾರಕಿಹೋಳಿ, ಅರವಿಂದ್ ಲಿಂಬಾವಳಿ, ಜಿ.ಎಂ.ಸಿದ್ದೇಶ್ವರ್, ಪ್ರತಾಪ್ ಸಿಂಹ, ಬಿ.ಪಿ.ಹರೀಶ್ ಸೇರಿದಂತೆ 12 ನಾಯಕರು ಸಭೆಯಲ್ಲಿ ಭಾಗಿಯಾಗಿದ್ದ ವಿವರ ಲಭ್ಯವಾಗಿದೆ.
ಮೇಲ್ನೋಟಕ್ಕೆ ಬಂಡಾಯ ನಾಯಕರು, ವಾಲ್ಮೀಕಿ ಹಗರಣಕ್ಕೆ (valmiki scam) ಸಂಬಂಧಿಸಿದಂತೆ ರಾಜ್ಯ ಸರ್ಕಾರದ (state govt) ವಿರುದ್ದ ಕೂಡಲ ಸಂಗಮದಿಂದ ಬಳ್ಳಾರಿಗೆ ಪಾದಯಾತ್ರೆ ಆಯೋಜಿಸುವ ಕುರಿತಂತೆ, ಸಭೆ ನಡೆಸಿರುವುದಾಗಿ ಹೇಳುತ್ತಿದ್ದಾರೆ.
ಆದರೆ ಬಿ.ಎಸ್.ಯಡಿಯೂರಪ್ಪ (b s yediyurappa) ಹಾಗೂ ಬಿ.ವೈ.ವಿಜಯೇಂದ್ರ ವಿರುದ್ದ ಹೈಕಮಾಂಡ್ ಗೆ ಸಂದೇಶ ರವಾನಿಸುವ ಉದ್ದೇಶ ಸದರಿ ಸಭೆಯದ್ದಾಗಿದೆ ಎಂದು ಆತೃಪ್ತ ನಾಯಕರ ತಂಡದ ಮೂಲಗಳು ಹೇಳುತ್ತವೆ.
ನಿಗೂಢ ನಡೆ : ಕುಮಾರ್ ಬಂಗಾರಪ್ಪ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ, ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಬಿ.ವೈ.ರಾಘವೇಂದ್ರ ಪರ ಪ್ರಚಾರ ನಡೆಸುವ ಮೂಲಕ ಈ ಎಲ್ಲ ಚರ್ಚೆಗಳಿಗೆ ತೆರೆ ಎಳೆದಿದ್ದರು.
ಈ ನಡುವೆ ಬಿಜೆಪಿಯಲ್ಲಿ ಉದ್ಭವವಾಗಿರುವ, ಯಡಿಯೂರಪ್ಪ – ವಿಜಯೇಂದ್ರ ವಿರೋಧಿ ಪಾಳೇಯದಲ್ಲಿ ದಿಢೀರ್ ಆಗಿ ಗುರುತಿಸಿಕೊಂಡಿದ್ದಾರೆ. ಕುಮಾರ್ ನಡೆಯು ಶಿವಮೊಗ್ಗ ಜಿಲ್ಲಾ ಬಿಜೆಪಿ ಪಾಳೇಯದಲ್ಲಿ ನಾನಾ ರೀತಿಯ ಚರ್ಚೆಗೆಡೆ ಮಾಡಿಕೊಟ್ಟಿದೆ.
ಯಡಿಯೂರಪ್ಪ ಕುಟುಂಬದೊಂದಿಗೆ ((b s yediyurappa family) ನಾನಾ ವಿಷಯಗಳ ಕುರಿತಂತೆ ಕುಮಾರ್ ಭಿನ್ನಾಭಿಪ್ರಾಯ ಹೊಂದಿದ್ದಾರೆಂಬ ಮಾತುಗಳು ರಾಜಕೀಯ ವಲಯದಲ್ಲಿ ಮೊದಲಿನಿಂದಲೂ ಕೇಳಿಬರುತ್ತಿವೆ. ಆದರೆ ಸಂಸದ ಬಿ.ವೈ.ರಾಘವೇಂದ್ರ (b y raghavendra) ಜೊತೆ ಹಲವು ಸಂದರ್ಭಗಳಲ್ಲಿ ಜೊತೆಜೊತೆಯಾಗಿ ಕಾಣಿಸಿಕೊಂಡಿದ್ದರು.
ಒಟ್ಟಾರೆ ಯಡಿಯೂರಪ್ಪ ಕುಟುಂಬದ ವಿರುದ್ದ ಕುಮಾರ್ ಬಂಗಾರಪ್ಪ ಮುನಿಸಿಕೊಳ್ಳಲು ಕಾರಣವೇನು? ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.