ಮಾ. 5 ರಂದು ಶಿವಮೊಗ್ಗ ನಗರ, ಹೊರವಲಯ, ಗ್ರಾಮಾಂತರ ಭಾಗದ ವಿವಿಧೆಡೆ ವಿದ್ಯುತ್ ವ್ಯತ್ಯಯ!

ಶಿವಮೊಗ್ಗ, ಮಾ. 4: ಶಿವಮೊಗ್ಗ ನಗರ, ಹೊರವಲಯ ಹಾಗೂ ತಾಲೂಕಿನ ವಿವಿಧೆಡೆ ಮಾ. 5 ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಸಂಸ್ಥೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳ ವಿವರ:-
ಮೆಸ್ಕಾಂ ಮಂಡ್ಲಿ ವಿವಿ ಕೇಂದ್ರದ ಊರಗಡೂರು ಫೀಡರ್-07 ರಲ್ಲಿ ಕಂಬ ಸ್ಥಳಾಂತರ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ವ್ಯಾಪ್ತಿಯಲ್ಲಿ ಮಾ. 5 ರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ನಿಂಗಪ್ಪ ಲೇಔಟ್, ಸೂಳೆಬೈಲು, ಊರಗಡೂರು, ಮಳಲಿಕೊಪ್ಪ, ಇಂದಿರಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಶಿವಮೊಗ್ಗನಗರ ಉಪವಿಭಾಗ-2 ಮಂಡ್ಲಿ ಭಾಗದಲ್ಲಿ ವ್ಯಾಪ್ತಿಯ ಘಟಕ-5 ಮತ್ತು 6 ರ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಇರುವ ಕಾರಣ ಮಾ.5 ರ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಪೇಪರ್ ಪ್ಯಾಕೇಜ್, ಮಂಡ್ಲಿ ಕೈಗಾರಿಕಾ ಪ್ರದೇಶ, ಹರಕೆರೆ, ನ್ಯೂಮಂಡ್ಲಿ, ಹಳೇ ಮಂಡ್ಲಿ, ಗಂಧರ್ವ ನಗರ, ಮಂಡ್ಲಿ ವೃತ್ತ, ಶಂಕರ ಕಣ್ಣಿನ ಆಸ್ಪತ್ರೆ, ಅನ್ನಪೂರ್ಣೇಶ್ವರಿ ಬಡಾವಣೆ, ಶಾರದ ನಗರ, ನಾರಾಯಣ ಹೃದಯಾಲಯ, ಗಜಾನನ ಗ್ಯಾರೇಜ್, ಮಂಜುನಾಥ ರೈಸ್‍ಮಿಲ್, ಬೆನಕೇಶ್ವರ ರೈಸ್‍ಮಿಲ್, ಸವಾಯಿ ಪಾಳ್ಯ, ಕರುಬರ ಪಾಳ್ಯ, ಇಲಿಯಾಜ್ ನಗರ 1ನೇ ಕ್ರಾಸ್‍ನಿಂದ 4ನೇ ಕ್ರಾಸ್, 1000 ಅಡಿ ರಸ್ತೆ, ಎಫ್-05 ಗಾಜನೂರು ಗ್ರಾಮಾಂತರ ಪ್ರದೇಶ, ಎಫ್-08 ರಾಮಿನಕೊಪ್ಪ
ಗ್ರಾಮಾಂತರ ಪ್ರದೇಶ, ಎಫ್-18 ಹೊಸಳ್ಳಿ, ಎಫ್-06 ಕಲ್ಲೂರು ಮಂಡ್ಲಿ ಗ್ರಾಮಾಂತರ ಪ್ರದೇಶ, ಎಫ್-17 ಐಹೊಳೆ, ಅಗಸವಳ್ಳಿ, ಕಲ್ಲೂರು, ಗೋವಿಂದಪುರ, ಅನುಪಿನಕಟ್ಟೆ, ಪುರದಾಳು, ರಾಮಿನಕೊಪ್ಪ, ಮೈಲಾರಪ್ಪನ ಕ್ಯಾಂಪ್ ಹಾಗೂ ಹನುಂತಾಪುರ, ಶರಾವತಿ ನಗರ, ಶಾರದ ಕಾಲೋನಿ ಸುತ್ತಮುತ್ತಲಿನ ಐಪಿ ಲಿಮಿಟ್‍ನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Previous post ಇಬ್ಬರು ರೌಡಿಗಳ ವಿರುದ್ದ ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಆದೇಶ..!
Next post <strong>ರಾಷ್ಟ್ರೀಯ ಲೈನ್ ಮ್ಯಾನ್ ಗಳ ದಿನಾಚರಣೆ</strong>