
28 ಕೆಜಿ ತೂಕ, 10 ಅಡಿ ಉದ್ದದ ಹೆಬ್ಬಾವು ಪತ್ತೆ..!
ಶಿವಮೊಗ್ಗ (shivamogga), ಆ. 13: ಭಾರೀ ಗಾತ್ರದ ಹೆಬ್ಬಾವೊಂದನ್ನು (python) ಉರಗ ಸಂರಕ್ಷಕ ಸ್ನೇಕ್ ಕಿರಣ್ ಸಂರಕ್ಷಿಸಿದ ಘಟನೆ ಶಿವಮೊಗ್ಗ ನಗರದ ಹೊರವಲಯ ಗಾಡಿಕೊಪ್ಪದಲ್ಲಿ (gadikoppa) ಆ. 12 ರ ಸೋಮವಾರ ರಾತ್ರಿ ನಡೆದಿದೆ.
ರಾತ್ರಿ 12 ಗಂಟೆ ಸುಮಾರಿಗೆ, ಗಾಡಿಕೊಪ್ಪ ಸರ್ಕಾರಿ ಶಾಲೆ ಹಿಂಭಾಗದ ರೋಟರಿ ಭವನ ಸಮೀಪದ ರಸ್ತೆಯಲ್ಲಿ ಹೆಬ್ಬಾವು (snake) ಕಾಣಿಸಿಕೊಂಡಿತ್ತು. ಇದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಉಂಟು ಮಾಡಿತ್ತು.
ಸಾರ್ವಜನಿಕರ ಮಾಹಿತಿ ಆಧಾರದ ಮೇಲೆ ಸ್ಥಳಕ್ಕಾಗಮಿಸಿದ ಕಿರಣ್ (snake kiran) ಅವರು ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ, ಸುರಕ್ಷಿತವಾಗಿ ಹೆಬ್ಬಾವನ್ನು ಸಂರಕ್ಷಿಸುವಲ್ಲಿ ಸಫಲರಾಗಿದ್ದಾರೆ.
‘ಸದರಿ ಹೆಬ್ಬಾವು 10 ಅಡಿ ಉದ್ದವಿದೆ. 28 ಕೆಜಿ ತೂಕವಿದ್ದು, ಭಾರೀ ಗಾತ್ರದ್ದಾಗಿದೆ. ಅರಣ್ಯ ಇಲಾಖೆ (forest dept) ವನ್ಯಜೀವಿ ವಿಭಾಗದ ಅಧಿಕಾರಿ – ಸಿಬ್ಬಂದಿಗಳ ಸಮ್ಮುಖದಲ್ಲಿ ಹೆಬ್ಬಾವನ್ನು ತಡರಾತ್ರಿಯೇ ಕಾಡಿಗೆ ಬಿಡಲಾಯಿತು’ ಎಂದು ಸ್ನೇಕ್ ಕಿರಣ್ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.