
ರಾಷ್ಟ್ರೀಯ ಲೈನ್ ಮ್ಯಾನ್ ಗಳ ದಿನಾಚರಣೆ
ಶಿವಮೊಗ್ಗ, ಮಾ. 4: ರಾಷ್ಟ್ರೀಯ ಲೈನ್ ಮ್ಯಾನ್ ಗಳ ದಿನಾಚರಣೆ ಅಂಗವಾಗಿ ಶನಿವಾರ ಶಿವಮೊಗ್ಗ ನಗರದ ಮೆಸ್ಕಾಂ ನಗರ ಉಪ ವಿಭಾಗ ಹಾಗೂ ಘಟಕ-1 ರ ಲೈನ್ ಮ್ಯಾನ್ ಗಳಿಗೆ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾನಗರದಲ್ಲಿರುವ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಣೆ ಮಾಡುವ ಲೈನ್ ಮ್ಯಾನ್ ಗಳ ಕಾರ್ಯನಿರ್ವಹಣೆಯ ಬಗ್ಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಲೈನ್ ಮ್ಯಾನ್ ಗಳಿಗೆ ಶಾಲು ಹೊದಿಸಿ, ಹೂವಿನ ಮಾಲೆ ಹಾಕಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಸುರೇಶ್ ಹಾಗೂ ಸಹಾಯಕ ಇಂಜಿನಿಯರ್ ನವೀನ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.