
ಬೈಕ್’ಗೆ ಪತ್ನಿ ಕಟ್ಟಿ ಎಳೆದೊಯ್ದ ಧೂರ್ತ ಪತಿ : ರಾಜಸ್ಥಾನದಲ್ಲಿ ಪೈಶಾಚಿಕ ಕೃತ್ಯ!
ರಾಜಸ್ಥಾನ (rajasthan), ಆ. 14: ಕುಡುಕ ಪತಿಯೋರ್ವ (husband), ಕ್ಷುಲ್ಲಕ ಕಾರಣಕ್ಕೆ ತನ್ನ ಪತ್ನಿಯನ್ನು (wife) ಬೈಕ್ ಗೆ ಕಟ್ಟಿ ಎಳೆದೊಯ್ದ ಭೀಕರ ಘಟನೆ, ರಾಜಸ್ಥಾನ ರಾಜ್ಯದ ನಾಗೌರ್ ಜಿಲ್ಲೆಯ ನಗರ್ ಸಿಂಗಾಪುರ ಎಂಬ ಪ್ರದೇಶದಲ್ಲಿ ನಡೆದಿದೆ. ತಡವಾಗಿ ಬೆಳಕಿಗೆ ಬಂದಿದೆ.
ಪ್ರೇಮರಾಮ್ ಮೇಘ್ವಾಲ್ (32) ಎಂಬಾತನೇ ಧೂರ್ತ ಪತಿಯಾಗಿದ್ದಾನೆ. ಆರೋಪಿ ಹಾಗೂ ಘಟನೆಯ ವೀಡಿಯೋ (video) ಮಾಡಿದ ವ್ಯಕ್ತಿಯನ್ನು ಪೊಲೀಸರು (police) ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆ ಮುಂದುವರಿಸಿದ್ದಾರೆ.
ಸುಮಾರು 1 ತಿಂಗಳ ಹಿಂದೆ ಘಟನೆ ನಡೆದಿತ್ತು. ಘಟನೆಯ ಕುರಿತಂತೆ ಪತ್ನಿ ಪೊಲೀಸರಿಗೆ ದೂರು (complaint) ನೀಡಿರಲಿಲ್ಲ. ಸಂಬಂಧಿಯೋರ್ವರ ಮನೆಯಲ್ಲಿ ನೆಲೆಸಿದ್ದಳು. ಇತ್ತೀಚೆಗೆ ಸದರಿ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ (viral) ಆಗಿತ್ತು.
ಪತ್ನಿಯ ಎರಡು ಕಾಲುಗಳನ್ನು ಹಗ್ಗದಿಂದ ಬಿಗಿದು, ಬೈಕ್ ಹಿಂಬದಿ ಕಟ್ಟಿಕೊಂಡು ಬೈಕ್ ಚಲಾಯಿಸಿದ್ದುದು ವೀಡಿಯೋದಲ್ಲಿ (vrial video) ಕಂಡುಬಂದಿತ್ತು. ಪತಿಯ ಪೈಶಾಚಿಕ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ತದನಂತರ ಪೊಲೀಸರು ಘಟನೆ ಕುರಿತಂತೆ ಪ್ರಕರಣ (case) ದಾಖಲಿಸಿಕೊಂಡಿದ್ದಾರೆ. ಸೋಮವಾರ ಪತಿಯನ್ನು ಬಂಧಿಸಿದ್ದಾರೆ (arrested).
ಕಾರಣವೇನು? : ತನ್ನ ಸಹೋದರಿ ಭೇಟಿಯಾಗಬೇಕೆಂಬ ಪತ್ನಿಯ ಬೇಡಿಕೆಯಿಂದ ಸಿಟ್ಟಿಗೆದ್ದ ಪತಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಆದರೆ ಸ್ಪಷ್ಟ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.
ಆರೋಪಿಯು ಮದ್ಯ ವ್ಯಸನಿಯಾಗಿದ್ದ (alcoholic). ನಿರಂತರವಾಗಿ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ಸ್ಥಳೀಯ ಗ್ರಾಮಸ್ಥರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.