
ತರೀಕೆರೆ – ಮಸರಹಳ್ಳಿ ರೈಲ್ವೆ ನಿಲ್ದಾಣಗಳ ನಡುವೆ ಅಪರಿಚಿತ ಪುರುಷನ ಶವ ಪತ್ತೆ!
ಶಿವಮೊಗ್ಗ (shivamogga), ಆ.14 : ತರೀಕೆರೆ – ಮಸರಹಳ್ಳಿ ರೈಲ್ವೆ ನಿಲ್ದಾಣಗಳ ನಡುವೆ ಅಪರಿಚಿತ ಪುರುಷನ ಶವ (body of an unknown man) ಪತ್ತೆಯಾದ ಘಟನೆ ಆ.13 ರಂದು ನಡೆದಿದೆ.
ತರೀಕೆರೆ – ಮಸರಹಳ್ಳಿ ರೈಲು ನಿಲ್ದಾಣಗಳ ನಡುವಿನ (between Tarikere – Masarahalli railway stations) ರೈಲ್ವೇ ಕಿ.ಮೀ. ನಂಬರ್ 30/900-30/800 ಸ್ಥಳದಲ್ಲಿ ಶವ ಪತ್ತೆಯಾಗಿದೆ. ರೈಲೊಂದರ (rail) ಲೋಕೋ ಪೈಲಟ್ (loco pilot), ಶವ ಗಮನಿಸಿ ರೈಲ್ವೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಮೃತ ವ್ಯಕ್ತಿಗೆ (deceased person) 35 ರಿಂದ 40 ವರ್ಷ ವಯೋಮಾನವಿದೆ. 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈ ಬಣ್ಣ, ತಲೆಯಲ್ಲಿ ಸುಮಾರು 01 ಇಂಚು ಕಪ್ಪು ಕೂದಲು, ಅರ್ಧ ಇಂಚು ಗಡ್ಡ ಮೀಸೆಯಿದ್ದು, ಹಿಂದೂ ಧರ್ಮದವರಂತೆ (hindu religion) ಕಂಡುಬರುತ್ತಾರೆ.
ಮೃತರು ನೀಲಿ ಬಣ್ಣದ ಗೆರೆಗಳಿರುವ ತುಂಬು ತೋಳಿನ ಶರ್ಟ್, ನೀಲಿ ಫಾರ್ಮಲ್ ಪ್ಯಾಂಟ್, ಸಿಮೆಂಟ್ ಬಣ್ಣದ ಬನಿಯನ್ ಧರಿಸಿರುವುದು ಕಂಡುಬಂದಿದೆ.
ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೇ ಪೊಲೀಸ್ ಸಬ್-ಇನ್ಸ್ಪೆಕ್ಟರ್, ದೂ.ಸಂ: 08182-222974 ಸಂಪರ್ಕಿಸಬಹುದೆಂದು ಶಿವಮೊಗ್ಗ ರೈಲ್ವೇ ಪೊಲೀಸ್ ಠಾಣೆಯ (shimoga railway police station) ಠಾಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
More Stories
shimoga | ಮಹಿಳಾ ಅಧಿಕಾರಿ ಪ್ರಕರಣದ ನಂತರ ಅಕ್ರಮ ಮರಳು ಲೂಟಿಗೆ ಬ್ರೇಕ್ : ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ಆಡಳಿತ?
shimoga | A temporary break in illegal sand looting after the case of the female officer: Does the administration need to wake up?
shimoga | ಮಹಿಳಾ ಅಧಿಕಾರಿ ಪ್ರಕರಣದ ನಂತರಕ ಅಕ್ರಮ ಮರಳು ಲೂಟಿಗೆ ತಾತ್ಕಾಲಿಕ ಬ್ರೇಕ್ : ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ಆಡಳಿತ?