
ಗಾಂಜಾ ಮಾರಾಟ : ಇಬ್ಬರು ಅರೆಸ್ಟ್!
ಶಿವಮೊಗ್ಗ, ಮಾ. 5: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಶಿವಮೊಗ್ಗ ನಗರದ ಕಾಮತ್ ಲೇಔಟ್ ಬಳಿ ನಡೆದಿದೆ.
ಕೆಳಗಿನ ತುಂಗಾ ನಗರ ಬಡಾವಣೆ ನಿವಾಸಿಗಳಾದ ಸೈಫುಲ್ಲಾ ಖಾನ್ (25) ಹಾಗೂ ಗೌಸ್ ಪೀರ್ (36) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಖಚಿತ ವರ್ತಮಾನದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಆರೋಪಿಗಳಿಂದ 10 ಸಾವಿರ ರೂ. ಮೌಲ್ಯದ 250 ಗ್ರಾಂ ತೂಕದ ಒಣ ಗಾಂಜಾ, 380 ರೂ.ನಗದು ಹಾಗೂ 1 ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.
ಸಬ್ ಇನ್ಸ್’ಪೆಕ್ಟರ್ ರಾಜುರೆಡ್ಡಿ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿದೆ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.