ರಕ್ತದಾನ ಮಾಡಿದ ಭದ್ರಾವತಿ ನ್ಯೂಟೌನ್ ಠಾಣೆ ಪೊಲೀಸರು

ಭದ್ರಾವತಿ, ಮಾ. 5: ಭದ್ರಾವತಿ ನಗರದ  ರೋಟರಿ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ, ನ್ಯೂ ಟೌನ್ ಠಾಣೆಯ ಪೊಲೀಸರು ರಕ್ತದಾನ ಮಾಡಿದರು.

ಶಿವಮೊಗ್ಗ ನಗರದ ಆಶಾ ಜ್ಯೋತಿ ಸ್ವಯಂಪ್ರೇರಿತ ರಕ್ತದಾನ ಕೇಂದ್ರದ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಸದರಿ ಶಿಬಿರದಲ್ಲಿ ನ್ಯೂಟೌನ್ ಪೊಲೀಸ್ ಠಾಣೆಯ ಸಬ್ ಇನ್ಸ್’ಪೆಕ್ಟರ್ ರಂಗನಾಥ್ ಅವರ  ನೇತೃತ್ವದಲ್ಲಿ ಸುಮಾರು 27 ಜನರು ರಕ್ತದಾನ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

Tunganagara Police Station Previous post <strong>ಗಾಂಜಾ ಮಾರಾಟ : ಇಬ್ಬರು ಅರೆಸ್ಟ್!</strong>
ಜೋಗ-ಕಾರ್ಗಲ್ Next post <strong>ಜೋಗ-ಕಾರ್ಗಲ್ ಪಟ್ಟಣ ಪಂಚಾಯ್ತಿ ಹೊರಗುತ್ತಿಗೆ ನೌಕರರ ಮುಷ್ಕರ!</strong>