ತಮಿಳುನಾಡಿನ ಕಮಲಿನಿ ಭರ್ಜರಿ ಬ್ಯಾಟಿಂಗ್!

ಶಿವಮೊಗ್ಗ, ಡಿ. 30:
ಶಿವಮೊಗ್ಗ ನಗರದ ಜೆ.ಎನ್.ಎನ್.ಸಿ.ಇ. ಕಾಲೇಜ್ ಮೈದಾನದಲ್ಲಿ ನಡೆಯುತ್ತಿರುವ ಬಿಸಿಸಿಐ 15 ವರ್ಷದೊಳಗಿನ ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ, ತಮಿಳುನಾಡು ತಂಡದ ಆಟಾಗಾರ್ತಿ ಕಮಲಿನಿ ಅವರು ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.

ಪಶ್ಚಿಮ ಬಂಗಾಳ, ತ್ರಿಪುರ ತಂಡಗಳ ವಿರುದ್ದ ಕ್ರಮವಾಗಿ ಶತಕ – ಅರ್ಧ ಶತಕ ಸಿಡಿಸಿದ್ದ ಅವರು, ಶುಕ್ರವಾರ ಹಿಮಾಚಲ ತಂಡದ ವಿರುದ್ದ ನಡೆದ ಪಂದ್ಯದಲ್ಲಿ ಶತಕ ದಾಖಲಿಸಿದ್ದಾರೆ.

ಈ ಮೂಲಕ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೆ ಕಮಲಿನಿ ಭಾಜರಾಗಿದ್ದಾರೆ

Previous post ಜಾತ್ರಾ ಮಹೋತ್ಸವ : ಭೋವಿ ಗುರುಪೀಠದ ಶ್ರೀಗಳು ಭಾಗಿ
Next post ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭೇಟಿ