ಜಾತ್ರಾ ಮಹೋತ್ಸವ : ಭೋವಿ ಗುರುಪೀಠದ ಶ್ರೀಗಳು ಭಾಗಿ

ಶಿವಮೊಗ್ಗ, ಡಿ. 30:
ಶಿವಮೊಗ್ಗ ತಾಲೂಕಿನ ನವುಲೆ ಬಸವೇಶ್ವರ ಗ್ರಾಮದಲ್ಲಿನ ಸತ್ಯಮ್ಮ ದೇವಿ ಹಾಗೂ ದುರ್ಗಮ್ಮ ದೇವಿ ಜಾತ್ರಾ ಮಹೋತ್ಸವವು ಶುಕ್ರವಾರ ನಡೆಯಿತು.

ಜಾತ್ರಾ ಮಹೋತ್ಸವದಲ್ಲಿ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಭಾಗವಹಿಸಿದ್ದರು. ಶ್ರೀಗಳನ್ನು ಮೆರವಣಿಗೆಯ ಮೂಲಕ ಕರೆ ತರಲಾಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಯಾಗಿದ್ದವು.

ಶಿವಮೊಗ್ಗ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ ಹೊನ್ನವಿಲೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Previous post ಹೊಸ ವರ್ಷಾಚರಣೆ : ಶಿವಮೊಗ್ಗ ಎಸ್ಪಿ ನೀಡಿದ ಖಡಕ್ ವಾರ್ನಿಂಗ್ ಏನು?
Next post ತಮಿಳುನಾಡಿನ ಕಮಲಿನಿ ಭರ್ಜರಿ ಬ್ಯಾಟಿಂಗ್!