ಲಘು ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ

ಶಿವಮೊಗ್ಗ, ಮಾ. 9:  ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ-ಹಳಿಯಾಳ ಹಾಗೂ ಟಾಟಾ ಮೋಟಾರ್ಸ್- ಧಾರವಾಡ  ಇವರ ಜಂಟಿ ಸಹಯೋಗದಲ್ಲಿ 30 ದಿನಗಳ ಲಘು ವಾಹನ ಚಾಲನಾ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು, 20-45 ವರ್ಷ ವಯೋಮಿತಿಯೊಳಗಿನ ಯುವಕರಿಂದ ಅರ್ಜಿ ಆಹ್ವಾನಿಸಿದೆ. 

ಆಸಕ್ತರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಹಾಲಿ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನೊಳಗೊಂಡ ಅರ್ಜಿಯನ್ನು ಏಪ್ರಿಲ್ 10 ರೊಳಗಾಗಿ ಕೆನರ ಬ್ಯಾಂಕ್ ದೇಶಪಾಂಡೆ ಆರ್‌ಸಿಟಿ, ವಿಸ್ತರಣಾ ಕೇಂದ್ರ ಹಸನಮಾಳ್, ದಾಂಡೇಲಿ-581325, ವಿಳಾಸಕ್ಕೆ ಕಳುಹಿಸುವುದು. ಅಥವಾ  ಮೊ.ಸಂ.: 08284-298547 / 9449782425/ 9632143217ಗಳಿಗೆ ವಾಟ್ಸ್ಪ್ ಮೂಲಕ ಕಳುಹಿಸುವುದು. ತರಬೇತಿಯು ಊಟೋಪಚಾರ ಹಾಗೂ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ.

Previous post ಸಿಮ್ಸ್ ನಲ್ಲಿ ಖಾಲಿಯಿರುವ ಹುದ್ದೆಗಳು : ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನ
Next post ಉದ್ಯೋಗಾವಕಾಶ : ವಿವಿಧ ಕಂಪನಿಗಳಿಂದ ನೇರ ಸಂದರ್ಶನ