ಎಂಐಎಫ್ಎಸ್ಇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ

ಶಿವಮೊಗ್ಗ, ಮಾ. 12: ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯಲ್ಲಿರುವ ಮಂಗಳೂರು ಇನ್ಸ್’ಟ್ಯೂಟ್ ಆಫ್ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಎಂಐಎಫ್ಎಸ್ಇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಮಾರಂಭದಲ್ಲಿ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಅನ್ನಪೂರ್ಣ, ನಾರಾಯಣ ಹೃದಯಾಲಯ ಆಸ್ಪತ್ರೆಯ ಸೇಫ್ಟಿ ಆಫೀಸರ್ ಟೆಲ್’ವಿನ್, ವಿದ್ಯಾಸಂಸ್ಥೆಯ ಉಪನ್ಯಾಸಕರಾದ ಸುಧಾಕರ್, ಹಾಲೇಶ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಎಂಐಎಫ್ಎಸ್ಇ ಸುರಕ್ಷತೆ ಕುರಿತಂತೆ ಗಣ್ಯರು ವಿದ್ಯಾರ್ಥಿಗಳಿಗೆ ಛಾಯಾಚಿತ್ರಗಳ ಪ್ರದರ್ಶನದ ಮೂಲಕ ಅಗ್ನಿ ಸೇರಿದಂತೆ ಮತ್ತೀತರ ಅವಘಡ ತಡೆಗಟ್ಟಲು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತಂತೆ ಸಮಗ್ರ ಮಾಹಿತಿ ನೀಡಿದರು.

ಕೆಲಸದ ಸ್ಥಳಗಳಲ್ಲಿ ಸುರಕ್ಷತೆ ಕಾಯ್ದುಕೊಳ್ಳುವುದು ಹಾಗೂ ಸಂಭಾವ್ಯ ಅವಘಡ ತಪ್ಪಿಸುವುದು ಸುರಕ್ಷತಾ ಅಧಿಕಾರಿಗಳ ಮುಖ್ಯ ಕಾರ್ಯವಾಗಿದೆ. ಈ ಕಾರಣದಿಂದ ಫೈರ್ ಮತ್ತು ಸೇಪ್ಟಿ ಕೋರ್ಸ್ ಮಾಡಿದವರಿಗೆ ದೇಶ-ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ ಎಂದು ಗಣ್ಯರು ಮಾಹಿತಿ ನೀಡಿದರು.

Previous post ಮಾ.13 ರಿಂದ ಪಾಲಿಕೆ ಹೊರಗುತ್ತಿಗೆ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ
Next post ಕೇವಲ ಹತ್ತು ದಿನದಲ್ಲಿ ಕೆರೆ ಕಟ್ಟಿ ಲೋಕಾರ್ಪಣೆ ಮಾಡಿದ ದಾನಿಗಳು, ಪರಿಸರ ಪ್ರೇಮಿಗಳು!