Shimoga : Drinking water scarcity in the DC office premises..! ಶಿವಮೊಗ್ಗ : ಡಿಸಿ ಕಚೇರಿ ಆವರಣದಲ್ಲಿಯೇ ಕುಡಿಯುವ ನೀರಿಗೆ ಹಾಹಾಕಾರ..!

shimoga | ಶಿವಮೊಗ್ಗ : ಡಿಸಿ ಕಚೇರಿ ಆವರಣದಲ್ಲಿಯೇ ಕುಡಿಯುವ ನೀರಿಗೆ ಹಾಹಾಕಾರ..!

ಶಿವಮೊಗ್ಗ (shivamogga), ನ. 25: ಜಿಲ್ಲೆಯ ಆಡಳಿತ ಶಕ್ತಿ ಕೇಂದ್ರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ, ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ಕಚೇರಿ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ, ಕಳೆದ ಹಲವು ದಿನಗಳಿಂದ ನೀರು ಲಭ್ಯವಾಗುತ್ತಿಲ್ಲ!

ಇದರಿಂದ ಪ್ರತಿನಿತ್ಯ ನಾನಾ ಕೆಲಸಕಾರ್ಯಗಳ ನಿಮಿತ್ತ ಡಿಸಿ ಕಚೇರಿಗೆ ಆಗಮಿಸುವ ನಾಗರೀಕರು, ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ. ಸುತ್ತಮುತ್ತಲಿನ ಹೋಟೆಲ್ ಮತ್ತೀತರೆಡೆ ತೆರಳಿ ತಮ್ಮ ದಾಹ ಇಂಗಿಸಿಕೊಳ್ಳುವಂತಾಗಿದೆ ಎಂದು ಕೆಲ ನಾಗರೀಕರು ದೂರುತ್ತಾರೆ.

ಘಟಕ ಸ್ಥಾಪನೆ : ಈ ಮೊದಲು ಡಿಸಿ ಕಚೇರಿ ಆವರಣದಲ್ಲಿ ನಾಗರೀಕರಿಗೆ ಕುಡಿಯುವ ನೀರು ಲಭ್ಯವಾಗುವ ಯಾವುದೇ ವ್ಯವಸ್ಥೆಯಿರಲಿಲ್ಲ. ಮಾಧ್ಯಮಗಳಲ್ಲಿ ಬಂದ ವರದಿ, ನಾಗರೀಕರ ಆಗ್ರಹದ ಮೇರೆಗೆ ಜಿಲ್ಲಾಡಳಿತವು ಲಕ್ಷಾಂತರ ರೂ. ವೆಚ್ಚದಲ್ಲಿ ಕಚೇರಿ ಪ್ರವೇಶ ದ್ವಾರದಲ್ಲಿ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿತ್ತು.

ಸದರಿ ಶುದ್ಧ ಕುಡಿಯುವ ನೀರಿನ ಘಟಕದಿಂದ ನಾಗರೀಕರಿಗೆ ಸಾಕಷ್ಟು ಅನುಕೂಲವಾಗಿದೆ. ಆದರೆ ಕಳೆದ ಕೆಲ ದಿನಗಳಿಂದ ಘಟಕಕ್ಕೆ ನೀರು ಪೂರೈಕೆಯಾಗದ ಕಾರಣದಿಂದ, ನೀರು ಲಭ್ಯವಾಗುತ್ತಿಲ್ಲ ಎಂದು ಕಚೇರಿಗೆ ಆಗಮಿಸುವ ಕೆಲ ನಾಗರೀಕರು ಹೇಳುತ್ತಾರೆ.

ಕಾಲಮಿತಿಯೊಳಗೆ, ಡಿಸಿ ಕಚೇರಿ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಸಮರ್ಪಕ ನಿರ್ವಹಣೆಗೆ ಕ್ರಮಕೈಗೊಳ್ಳಬೇಕು. ನಾಗರೀಕರಿಗೆ ಕುಡಿಯುವ ನೀರು ಲಭ್ಯವಾಗುವ ವ್ಯವಸ್ಥೆ ಮಾಡಬೇಕು ಎಂದು ನಾಗರೀಕರು ಜಿಲ್ಲಾಡಳಿತಕ್ಕೆ ಆಗ್ರಹಿಸುತ್ತಾರೆ.

There is shortage of drinking water in Shimoga city district office premises itself. In the clean drinking water plant in the office premises, water is not available for the last several days

One thought on “shimoga | ಶಿವಮೊಗ್ಗ : ಡಿಸಿ ಕಚೇರಿ ಆವರಣದಲ್ಲಿಯೇ ಕುಡಿಯುವ ನೀರಿಗೆ ಹಾಹಾಕಾರ..!

Comments are closed.

Shimoga: Road widening work - electricity supply cut off in various places on January 4! shimoga | ಶಿವಮೊಗ್ಗ : ರಸ್ತೆ ಅಗಲೀಕರಣ ಕಾಮಗಾರಿ - ಜ. 4 ರಂದು ವಿವಿಧೆಡೆ ವಿದ್ಯುತ್ ಪೂರೈಕೆ ಸ್ಥಗಿತ! Previous post shimoga | ಶಿವಮೊಗ್ಗ ನಗರದ ವಿವಿಧೆಡೆ ನವೆಂಬರ್ 27 ರಂದು ವಿದ್ಯುತ್ ವ್ಯತ್ಯಯ!
Shimoga: Heap of garbage in the government office room ಶಿವಮೊಗ್ಗ : ಸರ್ಕಾರಿ ಕಚೇರಿ ಕೊಠಡಿಯಲ್ಲಿ ಕಸದ ರಾಶಿ Next post shimoga | ಶಿವಮೊಗ್ಗ : ಸರ್ಕಾರಿ ಕಚೇರಿ ಕೊಠಡಿಯಲ್ಲಿ ಇದೇನಿದು..?