ಶಿವಮೊಗ್ಗ ಜಿ.ಪಂ.ಗೆ ಅತ್ಯುತ್ತಮ ಜಿಲ್ಲಾ ಪಂಚಾಯತ್ ಪ್ರಶಸ್ತಿ

ಶಿವಮೊಗ್ಗ, ಮಾ. 17: 2022-23 ನೇ ಸಾಲಿನ ಮಹಾತ್ಮಗಾಂಧಿ ನರೇಗಾ ಯೋಜನೆಯ ಅನುಷ್ಟಾನಕ್ಕೆ ಸಂಬಂಧಿಸಿದಂತೆ, ಅತ್ಯುತ್ತಮ ಜಿ.ಪಂ ಪ್ರಶಸ್ತಿ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್‍ಗೆ ದ್ವಿತೀಯ ಹಾಗೂ ಅತ್ಯುತ್ತಮ ತಾಲ್ಲೂಕು ಪಂಚಾಯತಿ ವಿಭಾಗದಲ್ಲಿ ಭದ್ರಾವತಿ ತಾಲ್ಲೂಕಿಗೆ ತೃತೀಯ ಬಹುಮಾನ ಲಭಿಸಿದೆ. 

ಕೃಷಿ ಸ್ನೇಹಿ ಪಂಚಾಯತ್ ಪುರಸ್ಕಾರ ವಿಭಾಗದಲ್ಲಿ ಸೊರಬ ತಾಲ್ಲೂಕಿನ ಕೃಷಿ ಇಲಾಖೆಗೆ ಅತ್ಯುತ್ತಮ ತಾಲ್ಲೂಕು ಮಟ್ಟದ ಅರಣ್ಯ ಇಲಾಖೆ ಪ್ರಶಸ್ತಿ, ಜಲ ಸಂಜೀವಿನಿ ಪಂಚಾಯತ್ ಪುರಸ್ಕಾರ ವಿಭಾಗದಲ್ಲಿ ಸಾಗರ ತಾಲ್ಲೂಕಿನ ಸೈದೂರು ಗ್ರಾಮ ಪಂಚಾಯಿತಿಗೆ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿ ಪುರಸ್ಕೃತರಿಗೆ ದಿನಾಂಕ: 24-03-2023 ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಗಾಂಧಿ ಗ್ರಾಮ ಪುರಸ್ಕಾರ’ ಮತ್ತು ‘ನರೇಗಾ ಹಬ್ಬ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಜಿ.ಪಂ ಸಿಇಓ ಎನ್.ಡಿ.ಪ್ರಕಾಶ್ ತಿಳಿಸಿದ್ದಾರೆ.




Previous post ಅಪ್ಪು ಹುಟ್ಟು ಹಬ್ಬದಂದು ಅನ್ನ ಸಂತರ್ಪಣೆ ಕಾರ್ಯಕ್ರಮ
Next post ಕೃಷಿ ಮೇಳದ ವೇದಿಕೆ ಮೇಲೆಯೇ ದಿಢೀರ್ ಪ್ರತಿಭಟನೆ..!