ಕೃಷಿ ಮೇಳದಲ್ಲಿ ಗಮನ ಸೆಳೆದ ಶ್ವಾನಗಳ ಪ್ರದರ್ಶನ

ಶಿವಮೊಗ್ಗ, ಮಾ. 19: ಶಿವಮೊಗ್ಗದ ಹೊರವಲಯ ನವುಲೆಯ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿ ಮತ್ತು ತೋಟಗಾರಿಕೆ ಮೇಳದ ಅಂಗವಾಗಿ ಭಾನುವಾರ ಜಿಲ್ಲಾ ಮಟ್ಟದ ಶ್ವಾನಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಪ್ರದರ್ಶನದಲ್ಲಿ 15 ವಿವಿಧ ತಳಿಯ 35 ಶ್ವಾನಗಳು ಭಾಗವಹಿಸಿದ್ದವು. ಪೊಲೀಸ್ ಇಲಾಖೆ ಗೌರಿ, ಜಾನು, ಹಂಸ ಶ್ವಾನಗಳು ಕೂಡ ಪ್ರದರ್ಶನದಲ್ಲಿ ಭಾಗವಹಿಸಿ ಚಾಕಚಕ್ಯತೆ ಪ್ರದರ್ಶಿಸಿದವು, ನೆರೆದಿದ್ದ ನಾಗರೀಕರ ಮೆಚ್ಚುಗೆ ಗಳಿಸಿದವು.

ಅಮೆರಿಕನ್ ಅಕಿತಾ, ಸೈಬಿರಿಯನ್ ಹಸ್ಕಿ ಶ್ವಾನಗಳು ಗಮನ ಸೆಳೆದವು. ಜರ್ಮನ್ ಶಫರ್ಡ್ ಶ್ವಾನವು ಪ್ರಥಮ ಬಹುಮಾನ ಗೌರವಕ್ಕೆ ಪಾತ್ರವಾಯಿತು. ವಿಶ್ವವಿದ್ಯಾಲಯದ ಡಾ.ಅಶೋಕ್ ಎಂ ಹಾಗೂ ಡಾ.ದಿವ್ಯಾ ಅವರು ಮೇಳದ ಉಸ್ತುವಾರಿವಹಿಸಿದ್ದರು.

Previous post ಕೃಷಿ ಮೇಳದ ವೇದಿಕೆ ಮೇಲೆಯೇ ದಿಢೀರ್ ಪ್ರತಿಭಟನೆ..!
Next post ಹಕ್ಕುಪತ್ರ ನೀಡಲು ಆಗ್ರಹಿಸಿ ಮಾ. 20 ರಿಂದ ಅನಿರ್ದಿಷ್ಟಾವಧಿ ಧರಣಿ : ಚುನಾವಣೆ ಬಹಿಷ್ಕಾರದ ಎಚ್ಚರಿಕೆ!