ಹಕ್ಕುಪತ್ರ ನೀಡಲು ಆಗ್ರಹಿಸಿ ಮಾ. 20 ರಿಂದ ಅನಿರ್ದಿಷ್ಟಾವಧಿ ಧರಣಿ : ಚುನಾವಣೆ ಬಹಿಷ್ಕಾರದ ಎಚ್ಚರಿಕೆ!

ಶಿವಮೊಗ್ಗ, ಮಾ. 19: ವಾಸದ ಮನೆಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಹೊಸಮನೆ 3 ಮತ್ತು 4 ನೇ ತಿರುವಿನ ನಿವಾಸಿಗಳು, ಮಾ. 20 ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಹಾಗೂ ಮುಂಬರುವ ವಿಧಾನಸಭೆ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ.
ಈ ಸಂಬಂಧ ಭಾನುವಾರ ಸ್ಥಳೀಯ ಯುವ ಮುಖಂಡರಾದ ಮಧುಸೂದನ್, ರಾಮ್ ಕುಮಾರ್, ನಿರಂಜನಮೂರ್ತಿ ಆರ್.ಕೆ., ಸುನೀಲ್ ಎನ್., ಅನೂಪ್ ವಿ., ಸತೀಶ್ ಕೆ., ಅಶೋಕ್ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಕಳೆದ 45 ಕ್ಕೂ ಅಧಿಕ ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದೆವೆ. ಆದರೆ ಇಲ್ಲಿಯವರೆಗೂ ಸುಮಾರು 70 ಕ್ಕೂ ಹೆಚ್ಚು ಮನೆಗಳಿಗೆ ಹಕ್ಕುಪತ್ರ ನೀಡಿಲ್ಲ. ಪ್ರತಿ ಚುನಾವಣೆ ವೇಳೆ ಹಕ್ಕುಪತ್ರ ನೀಡುವುದಾಗಿ ಜನಪ್ರತಿನಿಧಿಗಳು ಆಶ್ವಾಸನೆ ನೀಡುತ್ತಿದ್ದಾರೆ. ಆದರೆ ಹಕ್ಕುಪತ್ರ ವಿತರಿಸಿಲ್ಲ ಎಂದು ಮುಖಂಡರು ದೂರಿದ್ದಾರೆ.
ಹಕ್ಕುಪತ್ರದ ವಿಷಯವನ್ನು ಚುನಾವಣೆಯ ಅಜೆಂಡಾವನ್ನಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಹಕ್ಕುಪತ್ರ ಕೊಡಿಸುವ ನಿಟ್ಟಿನಲ್ಲಿ ಯಾವುದೇ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಿಲ್ಲ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸಮಸ್ಯೆಯನ್ನು ಜೀವಂತವಾಗಿಡುವ ಕಾರ್ಯ ನಡೆಸುತ್ತಿವೆ ಎಂದು ಮುಖಂಡರು ಆರೋಪಿಸಿದ್ದಾರೆ.
ವಾಸದ ಮನೆಗಳಿಗೆ ಕಾಲಮಿತಿಯೊಳಗೆ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಆಗ್ರಹಿಸಿ, ಮಾ.20 ರಿಂದ ಹೊಸಮನೆ ಬಡಾವಣೆ 3 ನೇ ತಿರುವಿನಲ್ಲಿರುವ ಅಂಬೇಡ್ಕರ್ ಸಮುದಾಯ ಭವನದ ಎದುರು ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುತ್ತಿದೆ.
ಹಾಗೆಯೇ ಮುಂಬರುವ ವಿಧಾನಸಭೆ ಚುನಾವಣೆ ವೇಳೆ ಮತದಾನ ಬಹಿಷ್ಕರಿಸಲು ನಿರ್ಧರಿಸಲಾಗಿದೆ. ತಕ್ಷಣವೇ ಆಡಳಿತ ನಿವಾಸಿಗಳ ಅಹವಾಲು ಆಲಿಸಿ, ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ.

One thought on “ಹಕ್ಕುಪತ್ರ ನೀಡಲು ಆಗ್ರಹಿಸಿ ಮಾ. 20 ರಿಂದ ಅನಿರ್ದಿಷ್ಟಾವಧಿ ಧರಣಿ : ಚುನಾವಣೆ ಬಹಿಷ್ಕಾರದ ಎಚ್ಚರಿಕೆ!

  1. ಚುನಾವಣೆ ಸಮಯದಲ್ಲಿ ಜನರ ಸಮಸ್ಯೆ ಆಲಿಸುವದಕ್ಕೆ
    ಯಾವ ಜನಪ್ರತಿನಿಧಿಗಳಿಗೂ ಸಮಯವಿಲ್ಲ ಮುಷ್ಕರ ಕುಳಿತು ಸಮಯ ವ್ಯಯ ಮಾಡುವುದಕ್ಕಿಂತ ಚುನಾವಣೆ
    ಮತದಾನ ಬಹಿಷ್ಕಾರದ ನಿರ್ಧಾರ ಪ್ರಕಟಿಸಿ ದೂರು ಉಳಿ
    ದು ಬಿಡಿ.ಯಾವ ಕಾರಣಕ್ಕೂ ನಿರ್ಧಾರದಿಂದ ದೂರ ಸರಿ
    ಯದೆ ಅಚಲವಾಗಿ ಇದ್ದರೆ ಮುಂದಿನ ರಾಜ್ಯ ಆಳುವವರಿ ಗೆ ಮತದಾರರ ಬಗ್ಗೆ ಜಾಗೃತಿಮೂಡುವದುಭರವಸೆಗಳನ್ನು
    ನೀಡುವಾಗ ನೂರು ಸಲ ವಿಚಾರಿಸುವ ಎಚ್ಚರಿಕೆವಹಿಸು ವರು

Comments are closed.

Previous post ಕೃಷಿ ಮೇಳದಲ್ಲಿ ಗಮನ ಸೆಳೆದ ಶ್ವಾನಗಳ ಪ್ರದರ್ಶನ
Next post <strong>ಇಬ್ಬರು ಮಕ್ಕಳೊಂದಿಗೆ ಪತ್ನಿ ಆತ್ಮಹತ್ಯೆ ಪ್ರಕರಣ : ಪತಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ!</strong>