ಬೆಂಗಳೂರು (bangalore), ಜನವರಿ 20: ಸರ್ಕಾರಿ ಕಚೇರಿಯಲ್ಲಿಯೇ, ಮಹಿಳೆಯರೊಂದಿಗೆ ಸರಸವಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೆ, ಪೊಲೀಸ್ ಇಲಾಖೆಯ ಡಿಜಿಪಿ ಡಾ. ರಾಮಚಂದ್ರರಾವ್ ಅವರನ್ನು ಅಮಾನತ್ತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಚೇರಿಯಲ್ಲಿ ಮಹಿಳೆಯರ ಜೊತೆ ಅಶ್ಲೀಲ ವರ್ತನೆಯಲ್ಲಿ ತೊಡಗಿದ್ದ ವಿಡಿಯೋಗಳು ಜನವರಿ 19 ರಂದು ವೈರಲ್ ಆಗಿದ್ದವು. ಇದು ಸರಕಾರಕ್ಕೆ ತೀವ್ರ ಇರುಸುಮುರುಸು ಉಂಟು ಮಾಡಿತ್ತು. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ಆರೋಪಿತ ಪೊಲೀಸ್ ಅಧಿಕಾರಿ ವಿರುದ್ದ ಶಿಸ್ತುಕ್ರಮ ಜರುಗಿಸುವುದಾಗಿ ತಿಳಿಸಿದ್ದರು.
ಏನೀದು ವಿಡಿಯೋ? : 47 ಸೆಕೆಂಡ್ ಗಳ ವೈರಲ್ ವಿಡಿಯೋದಲ್ಲಿ ರಾಮಚಂದ್ರರಾವ್ ಅವರಿಗೆ ಸೇರಿದ 3 ಪ್ರತ್ಯೇಕ ವಿಡಿಯೋಗಳಿವೆ. ಕಚೇರಿಯಲ್ಲಿಯೇ ಮಹಿಳೆಯರಿಗೆ ಮುತ್ತು ಕೊಡುವುದು, ತಬ್ಬಿಕೊಳ್ಳುವುದು ಸೇರಿದಂತೆ ಅಸಭ್ಯವಾಗಿ ವರ್ತಿಸುವುದು ಕಂಡುಬರುತ್ತದೆ.
ನಿರಾಕರಣೆ : ಈ ನಡುವೆ ಸದರಿ ವಿಡಿಯೋಗಳು ಎಐ (ಕೃತಕ ಬುದ್ದಿಮತ್ತೆ) ತಂತ್ರಜ್ಞಾನದಿಂದ ಸೃಷ್ಟಿಸಲಾಗಿದೆ. ತಮ್ಮ ವಿರುದ್ದ ಷಡ್ಯಂತ್ರ ನಡೆಸಲಾಗಿದೆ. ಇದರ ವಿರುದ್ದ ಕಾನೂನು ಹೋರಾಟ ನಡೆಸುವುದಾಗಿ ಡಾ. ರಾಮಚಂದ್ರರಾವ್ ಅವರು ತಿಳಿಸಿದ್ದರು.
Flirting in Office While in Uniform: DGP Ramachandra Rao Suspended! | Bengaluru, January 20: Following the viral spread of a video on social media showing him flirting with women inside a government office, the state government has issued an order suspending Police Department’s DGP Dr. Ramachandra Rao. Videos showing him engaging in obscene behavior with women in the office went viral on January 19, causing severe embarrassment to the government. Meanwhile, CM Siddaramaiah announced that disciplinary action would be taken against the accused police officer. What is this video? The 47-second viral clip contains three separate videos allegedly involving Ramachandra Rao. In these, he is seen kissing, hugging, and behaving inappropriately with women inside the office. Denial: Dr. Ramachandra Rao has claimed that the videos were created using AI (Artificial Intelligence) technology and that a conspiracy has been staged against him. He stated that he will fight a legal battle against this.

