ಶಿವಮೊಗ್ಗ (shivamogga), ಸೆಪ್ಟೆಂಬರ್ 09: ಮನೆಯ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಅಪಹರಿಸಿ ಪರಾರಿಯಾಗಿರುವ ಘಟನೆ ಶಿವಮೊಗ್ಗದ ಆರ್’ಎಂಎಲ್ ನಗರದ ಕಿಣಿ ಲೇಔಟ್ ನಲ್ಲಿ ಸೆಪ್ಟೆಂಬರ್ 08 ರಂದು ನಡೆದಿದೆ.
ಪತ್ರಕರ್ತ ಶಿ ಜು ಪಾಶಾ ಎಂಬುವರ ಮನೆಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಹಾಗೂ ದೊಡ್ಡಪೇಟೆ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
ಬೀರುವಿನಲ್ಲಿದ್ದ 1,02,500 ರೂ. ಮೌಲ್ಯದ 29 ಗ್ರಾಂ 823 ಮಿಲಿ ತೂಕದ ನೆಕ್ಲೇಸ್, 1,90,000 ರೂ. ಮೌಲ್ಯದ 15 ಗ್ರಾಂ ತೂಕದ ಹ್ಯಾಂಗಿಂಗ್ಸ್, 70,000 ರೂ. ಮೌಲ್ಯದ 8 ಗ್ರಾಂ ತೂಕದ ಬ್ರೇಸ್‌ಲೆಟ್,
1,15,000 ರೂ. ಮೌಲ್ಯದ 10 ಗ್ರಾಂ ತೂಕದ 2 ಬಂಗಾರದ ಉಂಗುರಗಳು, 30,000 ಮೌಲ್ಯದ 200 ಗ್ರಾಂ ತೂಕದ 3 ಜೊತೆ ಬೆಳ್ಳಿ ಕಾಲುಚೈನ್‌ಗಳು ಹಾಗೂ ಮನೆಯಲ್ಲಿದ್ದ 1,50,000 ನಗದು ಕಳವು ಮಾಡಲಾಗಿದೆ.
ಶಿ ಜು ಪಾಶಾರವರು ತಮ್ಮ ಕುಟುಂಬ ಸದಸ್ಯರೊಂದಿಗೆ ಬೆಳಿಗ್ಗೆ ತಂದೆ ಮನೆಯಲ್ಲಿ ಆಯೋಜಿಸಿದ್ದ ಖುರಾನ್ ಪಠಣ ಕಾರ್ಯಕ್ರಮಕ್ಕೆ ತೆರಳಿದ್ದರು. ಸಂಜೆ 4 ಗಂಟೆ ಸುಮಾರಿಗೆ ಮನೆಗೆ ಹಿಂದಿರುಗಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Shimoga: Journalist’s house robbed of jewelry and cash! | Shimoga, September 09: Burglars broke open the door lock and entered the house escaping with gold ornaments worth lakhs of rupees along with cash. The incident took place on September 08 at Kini Layout in RML Nagar Shimoga.

