shimoga news | ರಾಯಚೂರಿನಲ್ಲಿ ಕೊಲೆ ಪ್ರಕರಣ : ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಶಾಸಕ ಡಿ.ಎಸ್. ಅರುಣ್ ಆಗ್ರಹ

Murder Case in Raichur: MLC D.S. Arun Demands Adequate Compensation for Victim's Family | Shivamogga, October 27: Regarding the murder of Bapuru Narasimha Shetty in LBS Nagar, Raichur a comprehensive investigation must be conducted into the circumstances surrounding the incident. D.S. Arun a Member of the Legislative Council (MLC) and State Secretary of the BJP, has demanded that strict action be taken against those responsible.

ಶಿವಮೊಗ್ಗ (shivanogga), ಅಕ್ಟೋಬರ್ 27: ರಾಯಚೂರಿನ ಎಲ್.ಬಿ.ಎಸ್. ನಗರದಲ್ಲಿ ಬಾಪೂರು ನರಸಿಂಹ ಶೆಟ್ಟಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆಗೆ ಕಾರಣವಾಗಿರುವ ಅಂಶಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್.ಅರುಣ್ ಅವರು ಆಗ್ರಹಿಸಿದ್ದಾರೆ.

ಈ ಕುರಿತಂತೆ ಅವರು ಅಕ್ಟೋಬರ್ 27 ರಂದು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ರಾಯಚೂರು ನಗರದಲ್ಲಿ ಗಾಂಜಾ ಸೇವನೆ ಹಾಗೂ ಅಕ್ರಮ ಮಾರಾಟದ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಗಾಂಜಾ ವ್ಯಸನಕ್ಕೆ ಯುವಜನತೆ ಬಲಿಯಾಗುತ್ತಿರುವುದು ಹಾಗೂ ಅಕ್ರಮವಾಗಿ ಗಾಂಜಾ ಮಾರಾಟ ನಡೆಯುತ್ತಿರುವುದು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.

ಯುವಜನತೆಯನ್ನು ಮಾದಕ ವಸ್ತುಗಳ ವ್ಯಸನದಿಂದ ದೂರವಿಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕೊಲೆಯಾದ ಬಾಪೂರು ನರಸಿಂಹ ಶೆಟ್ಟಿ ಅವರ ಕುಟುಂಬಕ್ಕೆ ಅವರೇ ಪ್ರಮುಖ ಆಧಾರವಾಗಿದ್ದರು.

ಇದೀಗ ಅವರ ನಿಧನದಿಂದ ಪತ್ನಿ ಹಾಗೂ ಮಕ್ಕಳ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದೆ. ಕುಟುಂಬದ ಹಿತದೃಷ್ಟಿಯಿಂದ ಸರ್ಕಾರವು ಗರಿಷ್ಠ ಪರಿಹಾರ ಧನವನ್ನು ಮಂಜೂರು ಮಾಡಿ, ಸಂತ್ರಸ್ತ ಕುಟುಂಬಕ್ಕೆ ನೆರವಾಗಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆಯು ತಕ್ಷಣ ಕ್ರಮ ಕೈಗೊಂಡು, ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ನಡೆಸಿ, ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಡಿ ಎಸ್ ಅರುಣ್ ಅವರು ಆಗ್ರಹಿಸಿದ್ದಾರೆ.

Murder Case in Raichur: MLC D.S. Arun Demands Adequate Compensation for Victim’s Family | Shivamogga, October 27: Regarding the murder of Bapuru Narasimha Shetty in LBS Nagar, Raichur a comprehensive investigation must be conducted into the circumstances surrounding the incident. D.S. Arun a Member of the Legislative Council (MLC) and State Secretary of the BJP, has demanded that strict action be taken against those responsible.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *