ಶಿಕಾರಿಪುರ (shikaripura), ಅಕ್ಟೋಬರ್ 19: ಮನೆಯಲ್ಲಿಯೇ ನೇಣು ಬಿಗಿದುಕೊಂಡು ಯುವಕನೋರ್ವ ಆ**ತ್ಮ**ಹ**ತ್ಯೆಗೆ ಶರಣಾದ ಘಟನೆ, ಶಿಕಾರಿಪುರ ಪಟ್ಟಣದ ಚನ್ನಕೇಶವ ನಗರದಲ್ಲಿ ಅಕ್ಟೋಬರ್ 18 ರಂದು ನಡೆದಿದೆ.
ಎಂಜಿನಿಯರಿಂಗ್ ಪದವೀಧರ ಅನ್ವಿತ್ ಸಾಗರ್ (27) ಆ**ತ್ಮ**ಹ**ತ್ಯೆಗೆ ಶರಣಾದ ಯುವಕ ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗೆ ಉದ್ಯೋಗ ತೊರೆದಿದ್ದರು. ಶಿಕಾರಿಪುರ ಪಟ್ಟಣದ ನಿವಾಸದಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಅನ್ವಿತ್ ಸಾಗರ್ ಅವರು ಶನಿವಾರವಷ್ಟೇ ತಮ್ಮ ಪೋಷಕರೊಂದಿಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಮನೆಗೆ ಹಿಂದಿರುಗಿದ್ದರು. ಅನ್ವಿತ್ ಸಾಗರ್ ಅವರ ಆ**ತ್ಮ**ಹ**ತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ಘಟನಾ ಸ್ಥಳಕ್ಕೆ ಸಬ್ ಇನ್ಸ್’ಪೆಕ್ಟರ್ ಶರತ್ ಅವರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Young man dies by su**ic**id**e in Shikaripura town! | Shikaripura, October 19: An incident occurred on October 18 in Channakeshava Nagar, Shikaripura town, where a young man died by su**ic**id**e by hanging himself at his home.

