ಶಿವಮೊಗ್ಗ (shivamogga), ಅಕ್ಟೋಬರ್ 18: ಶಿವಮೊಗ್ಗದ ವಿನೋಬನಗರದ ಶುಭ ಮಂಗಳ ಕಲ್ಯಾಣ ಮಂಟಪದ ಎದುರು ಯುವ ಉದ್ಯಮಿ ಶಿವಕುಮಾರ್ ಆರಂಭಿಸಿರುವ, ಕಾರು ಹಾಗೂ ದ್ವಿಚಕ್ರ ವಾಹನ ಸ್ವಚ್ಛಗೊಳಿಸುವ ‘ದ ವಾಷಿಂಗ್ ಕ್ಲಬ್’ ಮಳಿಗೆಯನ್ನು, ಅಕ್ಟೋಬರ್ 18 ರಂದು ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ, ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಹಾಗೂ ಧನಂಜಯ ಸರ್ಜಿ ಅವರು ಉದ್ಘಾಟಿಸಿದರು.
ಉದ್ಘಾಟನೆಯ ನಂತರ ಘಟಕದ ಕಾರ್ಯನಿರ್ವಹಣೆಯನ್ನು ಸಂಸದ, ಶಾಸಕರು ವೀಕ್ಷಿಸಿದರು. ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಮೂಲಕ, ಉದ್ಯಮದ ಯಶಸ್ವಿಗೆ ಶುಭ ಹಾರೈಸಿದರು.
‘ದ ವಾಷಿಂಗ್ ಕ್ಲಬ್’ ಮಳಿಗೆಯು ಕಾರು ಹಾಗೂ ದ್ವಿ ಚಕ್ರ ವಾಹನಗಳನ್ನು ಸ್ವಚ್ಛಗೊಳಿಸುವ ಅತ್ಯಾಧುನಿಕ ವ್ಯವಸ್ಥೆಯನ್ನು ಒಳಗೊಂಡಿದೆ ಎಂದು ಯುವ ಉದ್ಯಮಿ ಶಿವಕುಮಾರ್ ಅವರು ತಿಳಿಸಿದ್ದಾರೆ.
ಸಮಾರಂಭದಲ್ಲಿ ಮುಖಂಡರಾದ ವೀರಭದ್ರಪ್ಪ ಪೂಜಾರ್, ರಾಜೇಶ್ ಕಾಮತ್, ಸತೀಶ್ ಟಿ, ಕುಟುಂಬ ಸದಸ್ಯರು, ಸ್ನೇಹಿತರು ಉಪಸ್ಥಿತರಿದ್ದರು.
Shivamogga, October 18: ‘The Washing Club’—a car and two-wheeler cleaning outlet established by young entrepreneur Shivakumar opposite Shubha Mangala Kalyana Mantapa in Vinobanagara – Shivamogga—was inaugurated on October 18 by Lok Sabha member B. Y. Raghavendra – Legislative Council member D. S. Arun and Dhananjaya Sarji.

