Header Ad Left
Udaya Saakshi
Header Ad Right
Skip to content
October 26, 2026
Udaya Saakshi

Udaya Saakshi

News Website

advertisement

  • Home
  • About
  • News
  • Videos
Main Menu

Tag: #shimoga news | ಶಿವಮೊಗ್ಗದಲ್ಲಿ ಪಾಳು ಬೀಳುತ್ತಿರುವ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕೈಗಾರಿಕಾ ಪ್ರದೇಶ – ಗಮನಹರಿಸುವರೆ ಸಿಎಂ ಡಿ ಕೆ ಶಿವಕುಮಾರ್?

ಶಿವಮೊಗ್ಗದಲ್ಲಿ ಪಾಳು ಬೀಳುತ್ತಿರುವ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕೈಗಾರಿಕಾ ಪ್ರದೇಶ - ಗಮನಹರಿಸುವರೆ ಸಿಎಂ ಡಿ ಕೆ ಶಿವಕುಮಾರ್? ವರದಿ : ಬಿ. ರೇಣುಕೇಶ್ ಶಿವಮೊಗ್ಗ, ಜೂನ್ 08: ಶಿವಮೊಗ್ಗದ ಹೊರವಲಯ ದೇವಕಾತಿಕೊಪ್ಪದಲ್ಲಿ ನಿರ್ಮಿಸಿರುವ ಕೈಗಾರಿಕಾ ವಸಾಹತು ಪ್ರದೇಶವು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಸಂಸ್ಥೆ (ಕೆಐಎಡಿಬಿ) ಯ ದಿವ್ಯ ನಿರ್ಲಕ್ಷ್ಯದಿಂದ ಪಾಳು ಬೀಳಲಾರಂಭಿಸಿದೆ. ಕೈಗಾರಿಕೋದ್ಯಮಿಗಳು ತೊಂದರೆಗೆ ಸಿಲುಕುವಂತಾಗಿದೆ! ಸದರಿ ಕೈಗಾರಿಕಾ ಪ್ರದೇಶಕ್ಕೆ ಇಲ್ಲಿಯವರೆಗೂ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ‘ಪರಿಸರ ವಿಮೋನಚನಾ ಪತ್ರ’ ದೊರಕಿಲ್ಲ. ಇದರಿಂದ ಹೊಸದಾಗಿ ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ದೊರಕುತ್ತಿಲ್ಲ. ಸದರಿ ಪ್ರದೇಶದಲ್ಲಿ ನಿವೇಶನ ಹೊಂದಿರುವ ಕೈಗಾರಿಕೋದ್ಯಮಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ನೂರಾರು ಕೋಟಿ ರೂ. ವೆಚ್ಚ : ದೇವಕಾತಿಕೊಪ್ಪ ಹಾಗೂ ಸಿದ್ಲಿಪುರ ಗ್ರಾಮ ವ್ಯಾಪ್ತಿಗಳಲ್ಲಿ 2013-14 ನೇ ಸಾಲಿನಲ್ಲಿ 456 ಎಕರೆ ಭೂಮಿಯನ್ನು ಕೆಐಎಡಿಬಿ ಸಂಸ್ಥೆ ಭೂ ಸ್ವಾದೀನ ಪಡಿಸಿಕೊಂಡಿತ್ತು. ಇದರಲ್ಲಿ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಸಂಸ್ಥೆಗೆ, 80 ಎಕರೆ, ಕೆಎಸ್ಎಸ್ಐಡಿ ಸಂಸ್ಥೆಗೆ 66 ಎಕರೆ, ಕಾರ್ಮಿಕ ಇಲಾಖೆಗೆ 10 ಎಕರೆ ಭೂಮಿ ನೀಡಲಾಗಿತ್ತು. ಉಳಿದಂತೆ ಕೆಐಎಡಿಬಿ ಸಂಸ್ಥೆಯು 2018-19 ರಲ್ಲಿ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ದೇವಕಾತಿಕೊಪ್ಪದ 250 ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ಲೇಔಟ್ ರಚನೆ ಮಾಡಿತ್ತು. ನಿವೇಶನ ಕೂಡ ಹಂಚಿಕೆ ಮಾಡಿತ್ತು. ಅನುಮತಿ ಪಡೆಯಲಿಲ್ಲ : ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿ ಸಮೀಪದಲ್ಲಿ ಸದರಿ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶವಿರುವುದರಿಂದ, ನಿಯಮಾನುಸಾರ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ‘ಪರಿಸರ ವಿಮೋನಚನಾ ಪತ್ರ’ವನ್ನು ಕೆಐಎಡಿಬಿ ಸಂಸ್ಥೆ ಪಡೆದುಕೊಳ್ಳಬೇಕಾಗಿತ್ತು. ಆದರೆ ಅನುಮತಿ ಪಡೆದುಕೊಂಡಿರಿಲಿಲ್ಲ. ಮತ್ತೊಂದೆಡೆ, ಸದರಿ ಸ್ಥಳದಲ್ಲಿ ಕೈಗಾರಿಕೆಗಳ ನಿರ್ಮಾಣಕ್ಕೆ ಕೆಐಎಡಿಬಿ ಸಂಸ್ಥೆಯು ಅನುಮತಿ ನೀಡಿತ್ತು. ಅದರಂತೆ ಸರಿಸುಮಾರು 20 ಕೈಗಾರಿಕೆ ಸಂಸ್ಥೆಗಳು ಕಾರ್ಯನಿರ್ವಹಣೆ ಮಾಡುತ್ತಿವೆ. ತದನಂತರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು, ಪರಿಸರ ವಿಮೋಚನಾ ಪತ್ರ ಪಡೆಯದೆ ಕೈಗಾರಿಕೆಗಳ ಸ್ಥಾಪನೆಗೆ ಅನುಮತಿ ನೀಡಬಾರದು ಎಂದು ಸೂಚಿಸಿತ್ತು. ತದನಂತರ ಕೈಗಾರಿಕೆಗಳ ಸ್ಥಾಪನೆಗೆ ಕೆಐಎಡಿಬಿ ಸಂಸ್ಥೆ ಅನುಮತಿ ನೀಡುತ್ತಿಲ್ಲ. ಪರಿಹಾರವಾಗಿಲ್ಲ : ಇದರಿಂದ ಕಳೆದ ಹಲವು ವರ್ಷಗಳಿಂದ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ ಹೊಸ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಕೆಐಎಡಿಬಿ ಸಂಸ್ಥೆಯು ಪರಿಸರ ವಿಮೋಚನಾ ಪತ್ರ ಪಡೆದುಕೊಳ್ಳುವ ನಿಟ್ಟಿನಲ್ಲಿ ಗಂಭೀರ ಚಿತ್ತ ಹರಿಸಿಲ್ಲ. ಇದರಿಂದ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕೈಗಾರಿಕಾ ಪ್ರದೇಶವು ಪಾಳು ಬೀಳಲಾರಂಭಿಸಿದೆ. ಸಿಎಂ ಗಮನಿಸಲಿ : ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶಕ್ಕೆ ಪರಿಸರ ವಿಮೋಚನಾ ಪತ್ರ ಪಡೆಯುವ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ. ಈ ಕುರಿತಂತೆ ಸಿಎಂ ಡಿ ಕೆ ಶಿವಕುಮಾರ್ ಅವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಜೊತೆ ಸಮಾಲೋಚಿಸಬೇಕಾಗಿದೆ. ಕಾಲಮಿತಿಯೊಳಗೆ ಸಮಸ್ಯೆಗೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕಾಗಿದೆ ಎಂದು ಕೆಲ ಕೈಗಾರಿಕೋದ್ಯಮಿಗಳು ಆಗ್ರಹಿಸುತ್ತಾರೆ.
Shivamogga / ಶಿವಮೊಗ್ಗ

shimoga news | ಶಿವಮೊಗ್ಗದಲ್ಲಿ ಪಾಳು ಬೀಳುತ್ತಿರುವ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕೈಗಾರಿಕಾ ಪ್ರದೇಶ – ಗಮನಹರಿಸುವರೆ ಸಿಎಂ ಡಿ ಕೆ ಶಿವಕುಮಾರ್?

June 8, 2026June 8, 2026 - by B. Renukesha - Leave a Comment

Industrial area built at a cost of crores of rupees is falling into disrepair in Shivamogga – Will CM D K Shivakumar pay attention?
ಶಿವಮೊಗ್ಗದಲ್ಲಿ ಪಾಳು ಬೀಳುತ್ತಿರುವ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕೈಗಾರಿಕಾ ಪ್ರದೇಶ – ಗಮನಹರಿಸುವರೆ ಸಿಎಂ ಡಿ ಕೆ ಶಿವಕುಮಾರ್?

shimoga news | ಶಿವಮೊಗ್ಗದಲ್ಲಿ ಪಾಳು ಬೀಳುತ್ತಿರುವ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಕೈಗಾರಿಕಾ ಪ್ರದೇಶ – ಗಮನಹರಿಸುವರೆ ಸಿಎಂ ಡಿ ಕೆ ಶಿವಕುಮಾರ್? Read More

Latest YouTube Video

shimoga dasara news  | ಶಿವಮೊಗ್ಗ ದಸರಾ - 21/10/2026 ರಂದು ಅದ್ದೂರಿಯಾಗಿ ನಡೆದ ವಿಜಯದಶಮಿ ಮೆರವಣಿಗೆ | #shimog

shimoga dasara news | ಶಿವಮೊಗ್ಗ ದಸರಾ - 21/10/2026 ರಂದು ಅದ್ದೂರಿಯಾಗಿ ನಡೆದ ವಿಜಯದಶಮಿ ಮೆರವಣಿಗೆ | #shimog

October 26, 2026

Follow Us:

Join our WhatsApp group

Latest Posts

dead body

shimoga news | ಶಿವಮೊಗ್ಗ : ಈಜಲು ತೆರಳಿದ ಇಬ್ಬರು ನೀರುಪಾಲು!

October 25, 2026October 25, 2026

ಈ ಬದ್ಧತೆ ಎಂದೂ ಭದ್ರ : “ಸಮಾಜದ ಕಟ್ಟ ಕಡೆಯವರಿಗೆ ಮೊಟ್ಟ ಮೊದಲ ಸ್ಥಾನ…”

October 25, 2026

Janagere Venkataramaiah Emerges as Consensus Candidate for KaSaPa Central President Post | Shivamogga: Jayaprakash Gowda, President of the Mandya Karnataka Sangha, has urged that the Kannada Sahitya Parishat (KaSaPa) should not become a domain for the arrogance of power, but rather a platform for the struggles of dedicated Kannada advocates. In this spirit, he called for support to ensure the victory of pro-Kannada activist Janagere Venkataramaiah, who has emerged as the consensus candidate for the position of Central President of the KaSaPa.

sigandur news | ಕಸಾಪ ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯ ಒಮ್ಮತದ ಅಭ್ಯರ್ಥಿ

October 25, 2026October 25, 2026

thirthahalli news | ತೀರ್ಥಹಳ್ಳಿ : ಹಣಗೆರೆಕಟ್ಟೆ ದೇವಾಲಯಕ್ಕೆ ತೆರಳುತ್ತಿದ್ದ ವಾಹನ ಪಲ್ಟಿ -12 ಜನರಿಗೆ ಗಾಯ!

October 25, 2026October 25, 2026

shimoga news | Drinking water supply disruption in Shivamogga city ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

shimoga drinking water news | ಶಿವಮೊಗ್ಗ ನಗರದ ವಿವಿಧೆಡೆ ಅಕ್ಟೋಬರ್ 25 ರ ಬೆಳಿಗ್ಗೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ!

October 24, 2026October 24, 2026

power cut

shimoga power cut news | ಶಿವಮೊಗ್ಗ ನಗರದ ವಿವಿಧೆಡೆ ಅಕ್ಟೋಬರ್ 25 ರಂದು ವಿದ್ಯುತ್ ವ್ಯತ್ಯಯ!

October 24, 2026October 24, 2026

Tragic Accident in Shikaripura: Four Dead! | Shikaripura, October 24: A head-on collision between a car and a lorry occurred on the evening of October 23 on a state highway near Mattighatta Camp in the Shikaripura taluk of Shivamogga district. Four occupants of the car died and one person sustained serious injuries.

shikaripura accident news | ಶಿಕಾರಿಪುರ ಭೀಕರ ಅಪಘಾತ ಪ್ರಕರಣ : ನಾಲ್ವರ ದುರ್ಮರಣ!

October 24, 2026October 24, 2026

shikaripura accident news | ಶಿಕಾರಿಪುರ : ಕಾರು – ಲಾರಿ ನಡುವೆ ಭೀಕರ ಅಪಘಾತ!

October 23, 2026October 23, 2026

Shivamogga 'Jambu Savari' Incident: Deity Idol and Ornaments Safe – Vehicle Owner to Receive Compensation! | Shivamogga, October 23: It has been reported that the silver idol of Goddess Chamundeshwari—housed within the *ambari* (howdah)—remained undamaged when the elephant 'Somanna', which was carrying the *ambari* during the Vijayadashami 'Jambu Savari' procession in Shivamogga city, ran off in a panic.

shimoga dasara news | ಶಿವಮೊಗ್ಗ ಜಂಬೂ ಸವಾರಿ ಪ್ರಕರಣ : ದೇವರ ವಿಗ್ರಹ, ಆಭರಣಗಳು ಸುರಕ್ಷಿತ – ವಾಹನ ಮಾಲೀಕರಿಗೆ ಸಿಗಲಿದೆ ಪರಿಹಾರ!

October 23, 2026

doddapete police station, shimoga,

shimoga news | ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 28 ರಂದು ನಡೆಯಲಿದೆ 88 ದ್ವಿಚಕ್ರ  ವಾಹನಗಳ ಬಹಿರಂಗ ಹರಾಜು

October 23, 2026October 23, 2026

Recent Posts

  • shimoga news | ಶಿವಮೊಗ್ಗ : ಈಜಲು ತೆರಳಿದ ಇಬ್ಬರು ನೀರುಪಾಲು!
  • ಈ ಬದ್ಧತೆ ಎಂದೂ ಭದ್ರ : “ಸಮಾಜದ ಕಟ್ಟ ಕಡೆಯವರಿಗೆ ಮೊಟ್ಟ ಮೊದಲ ಸ್ಥಾನ…”
  • sigandur news | ಕಸಾಪ ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯ ಒಮ್ಮತದ ಅಭ್ಯರ್ಥಿ
  • thirthahalli news | ತೀರ್ಥಹಳ್ಳಿ : ಹಣಗೆರೆಕಟ್ಟೆ ದೇವಾಲಯಕ್ಕೆ ತೆರಳುತ್ತಿದ್ದ ವಾಹನ ಪಲ್ಟಿ -12 ಜನರಿಗೆ ಗಾಯ!
  • shimoga drinking water news | ಶಿವಮೊಗ್ಗ ನಗರದ ವಿವಿಧೆಡೆ ಅಕ್ಟೋಬರ್ 25 ರ ಬೆಳಿಗ್ಗೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ!
Copyright © 2026 Udaya Saakshi.
Powered by WordPress and HitMag.