ಊಟದ ವಿಚಾರಕ್ಕೆ ನಡೆಯಿತು ಡಬ್ಬಲ್ ಮರ್ಡರ್..!

ಊಟದ ವಿಚಾರಕ್ಕೆ ನಡೆಯಿತು ಡಬ್ಬಲ್ ಮರ್ಡರ್..!

ತೀರ್ಥಹಳ್ಳಿ, ಮೇ 18: ತೀರ್ಥಹಳ್ಳಿಯಲ್ಲಿ ನಡೆದ ಕೂಲಿ ಕಾರ್ಮಿಕರಿಬ್ಬರ ಡಬ್ಬಲ್ ಮರ್ಡರ್ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಊಟದ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಮಿಕರಲ್ಲಿ ಉಂಟಾದ ಗಲಾಟೆಯೇ, ಹತ್ಯೆಗೆ ಕಾರಣವಾಗಿರುವ ಅಂಶ ಬೆಳಕಿಗೆ ಬಂದಿದೆ!

ದಾವಣಗೆರೆ ಜಿಲ್ಲೆಯ ರಾಜಣ್ಣ (58) ಹತ್ಯೆ ಆರೋಪಿಯಾಗಿದ್ದಾನೆ. ಬೀರೇಶ್ (35) ಹಾಗೂ ಮಂಜುನಾಥ್ (46) ಕೊಲೆಗೀಡಾದ ಕೂಲಿ ಕಾರ್ಮಿಕರಾಗಿದ್ದಾರೆ. ಇವರೆಲ್ಲರು ದಾವಣಗೆರೆಯವರಾಗಿದ್ದಾರೆ. ಟೈಲ್ಸ್ ಕೆಲಸ ಮಾಡುವುದಕ್ಕಾಗಿ ತೀರ್ಥಹಳ್ಳಿಗೆ ಆಗಮಿಸಿದ್ದರು.

ಊಟದ ವಿಚಾರಕ್ಕೆ ನಡೆಯಿತು ಡಬ್ಬಲ್ ಮರ್ಡರ್..! Read More
‘ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ’ : ಸಿದ್ದರಾಮಯ್ಯ ಹೇಳಿಕೆ

‘ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ’ : ಸಿದ್ದರಾಮಯ್ಯ ಹೇಳಿಕೆ

ಬೆಂಗಳೂರು, ಮೇ 18: ‘ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ’ ಎಂದು ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.

ಗುರುವಾರ ಮಧ್ಯಾಹ್ನ ಸಿದ್ದರಾಮಯ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಸಂದೇಶ ಹಾಕಿದ್ದಾರೆ. ‘ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಜೊತೆಗೆ, ‘ನಮ್ಮ ಎಲ್ಲ ಗ್ಯಾರೆಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ’ ಎಂದು ಟ್ವಿಟರ್ ಸಂದೇಶದಲ್ಲಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ಭರವಸೆ ನೀಡಿದ್ದಾರೆ.

‘ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ’ : ಸಿದ್ದರಾಮಯ್ಯ ಹೇಳಿಕೆ Read More
ಶಿವಮೊಗ್ಗ, ಮೇ 18: ರಾತ್ರಿ ವೇಳೆ ನಿರ್ಜನ ಪ್ರದೇಶಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಹಾಗೂ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪದ ಮೇರೆಗೆ, ಪೊಲೀಸರು 11 ಜನರನ್ನು ವಶಕ್ಕೆ ಪಡೆದ ಘಟನೆ ಗುರುವಾರ ರಾತ್ರಿ ಶಿವಮೊಗ್ಗ ನಗರದಲ್ಲಿ ನಡೆದಿದೆ. ತುಂಗಾ ನಗರ ಠಾಣೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಠಾಣಾ ವ್ಯಾಪ್ತಿಯ ಸೂಳೇಬೈಲು, ಮದಾರಿಪಾಳ್ಯ, ಎಂ.ಆರ್.ಎಸ್. ವೃತ್ತ, ಪ್ರಿಯಾಂಕ ಲೇಔಟ್, ವಡ್ಡಿನಕೊಪ್ಪ ಸುತ್ತಮುತ್ತಲಿನ ಸ್ಥಳಗಳಲ್ಲಿ ವಿಶೇಷ ಗಸ್ತು ನಡೆಸಲಾಗಿದೆ. ಒಟ್ಟಾರೆ 11 ಜನರನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದಾರೆ. ಸದರಿ ವ್ಯಕ್ತಿಗಳ ಪೂರ್ವಾಪರ ಪರಿಶೀಲಿಸಿದ್ದಾರೆ. ಜೊತೆಗೆ 8 ಲಘು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ನಿರ್ಜನ ಪ್ರದೇಶಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರು ಪೊಲೀಸ್ ವಶಕ್ಕೆ!

ಶಿವಮೊಗ್ಗ, ಮೇ 18: ರಾತ್ರಿ ವೇಳೆ ನಿರ್ಜನ ಪ್ರದೇಶಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಹಾಗೂ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪದ ಮೇರೆಗೆ, ಪೊಲೀಸರು 11 ಜನರನ್ನು ವಶಕ್ಕೆ ಪಡೆದ ಘಟನೆ ಗುರುವಾರ ರಾತ್ರಿ ಶಿವಮೊಗ್ಗ ನಗರದಲ್ಲಿ ನಡೆದಿದೆ.

ತುಂಗಾ ನಗರ ಠಾಣೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಠಾಣಾ ವ್ಯಾಪ್ತಿಯ ಸೂಳೇಬೈಲು, ಮದಾರಿಪಾಳ್ಯ, ಎಂ.ಆರ್.ಎಸ್. ವೃತ್ತ, ಪ್ರಿಯಾಂಕ ಲೇಔಟ್, ವಡ್ಡಿನಕೊಪ್ಪ ಸುತ್ತಮುತ್ತಲಿನ ಸ್ಥಳಗಳಲ್ಲಿ ವಿಶೇಷ ಗಸ್ತು ನಡೆಸಲಾಗಿದೆ.

ಒಟ್ಟಾರೆ 11 ಜನರನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದಾರೆ. ಸದರಿ ವ್ಯಕ್ತಿಗಳ ಪೂರ್ವಾಪರ ಪರಿಶೀಲಿಸಿದ್ದಾರೆ. ಜೊತೆಗೆ 8 ಲಘು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ನಿರ್ಜನ ಪ್ರದೇಶಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರು ಪೊಲೀಸ್ ವಶಕ್ಕೆ! Read More
ತೀರ್ಥಹಳ್ಳಿಯಲ್ಲಿ ಡಬ್ಬಲ್ ಮರ್ಡರ್ : ಕೂಲಿಕಾರ್ಮಿಕರಿಬ್ಬರ ಬರ್ಬರ ಹತ್ಯೆ!

ತೀರ್ಥಹಳ್ಳಿಯಲ್ಲಿ ಡಬ್ಬಲ್ ಮರ್ಡರ್ : ಕೂಲಿ ಕಾರ್ಮಿಕರಿಬ್ಬರ ಬರ್ಬರ ಹತ್ಯೆ!

ತೀರ್ಥಹಳ್ಳಿ, ಮೇ 18: ತೀರ್ಥಹಳ್ಳಿ ಪಟ್ಟಣದಲ್ಲಿ ಕೂಲಿಕಾರ್ಮಿಕರಿಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದ್ದು, ಗುರುವಾರ   ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.

ದಾವಣಗೆರೆ ಜಿಲ್ಲೆಯ ಮಂಜಪ್ಪ (45) ಹಾಗೂ ಬೀರಪ್ಪ (46) ಕೊಲೆಗೀಡಾದ ಕೂಲಿ ಕಾರ್ಮಿಕರೆಂದು ಗುರುತಿಸಲಾಗಿದೆ. ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿಯ ವಿಠ್ಠಲನಗರಕ್ಕೆ ಹೋಗುವ ರಸ್ತೆಯಲ್ಲಿನ ಪುತ್ತಿಗೆ ಮಠ ಸಮೀಪದ, ನಿರ್ಮಾಣ ಹಂತದಲ್ಲಿರುವ ವಿಶ್ವಕರ್ಮ ಸಮುದಾಯ ಭವನದೊಳಗೆ ಕೊಲೆ ನಡೆದಿದೆ.

ತೀರ್ಥಹಳ್ಳಿಯಲ್ಲಿ ಡಬ್ಬಲ್ ಮರ್ಡರ್ : ಕೂಲಿ ಕಾರ್ಮಿಕರಿಬ್ಬರ ಬರ್ಬರ ಹತ್ಯೆ! Read More