shimoga news | ಶಿವಮೊಗ್ಗ : ಅಗ್ನಿಶಾಮಕ ಹುತಾತ್ಮರ ದಿನಾಚರಣೆ – ಸೇವಾ ಸಪ್ತಾಹಕ್ಕೆ ಚಾಲನೆ

Shivamogga: Firefighters’ Martyrs Day – Launch of Fire Service Week ಶಿವಮೊಗ್ಗ : ಅಗ್ನಿಶಾಮಕ ಹುತಾತ್ಮರ ದಿನಾಚರಣೆ – ಸೇವಾ ಸಪ್ತಾಹಕ್ಕೆ ಚಾಲನೆ

ಶಿವಮೊಗ್ಗ (shivamogga), ಏಪ್ರಿಲ್ 14: ಶಿವಮೊಗ್ಗ ನಗರದ ಅಗ್ನಿಶಾಮಕ ಕಚೇರಿಯಲ್ಲಿ ಏಪ್ರಿಲ್ 14 ರಂದು ಅಗ್ನಿಶಾಮಕ ಹುತಾತ್ಮರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಶಿವಮೊಗ್ಗ ವಲಯದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹಾಗೂ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿಗಳ ನೇತೃತ್ವದಲ್ಲಿ ಸಮಾರಂಭ ನಡೆಯಿತು. ಹುತಾತ್ಮ ಅಗ್ನಿಶಾಮಕ ಸಿಬ್ಬಂದಿಗಳಿಗೆ 2 ನಿಮಿಷ ಮೌನಾಚಾರಣೆ ಮೂಲಕ ಗೌರವಾರ್ಪಣೆ ಸಲ್ಲಿಸಲಾಯಿತು.

ಸೇವಾ ಸಪ್ತಾಹ : ಸದರಿ ಕಾರ್ಯಕ್ರಮದ ನಂತರ ಅಗ್ನಿಶಾಮಕ ಸೇವಾ ಸಪ್ತಾಹ ಕಾರ್ಯಕ್ರಮ ನಡೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಅಧಿಕಾರಿಗಳು – ಸಿಬ್ಬಂದಿಗಳು ಜಾಥಾ ನಡೆಸಿದರು.

“ಸುರಕ್ಷಿತ ಶಾಲೆ, ಸುರಕ್ಷಿತ ಆಸ್ಪತ್ರೆ ಮತ್ತು ಅಗ್ನಿ ಸುರಕ್ಷತೆಯ ಅರಿವುಳ್ಳ ಸಮಾಜ – ಅಗ್ನಿ ಮುಂಜಾಗ್ರತೆಗಾಗಿ ಒಂದಾಗಿ” ಎಂಬ ಧ್ಯೇಯ ವಾಕ್ಯದೊಂದಿಗೆ ಸಾರ್ವಜನಿಕರಲ್ಲಿ ಅಗ್ನಿ ಮುಂಜಾಗ್ರತೆ ಹಾಗೂ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿದರು. ಕರಪತ್ರ ವಿತರಣೆ ಮಾಡಿದರು.

Shivamogga: Firefighters’ Martyrs Day – Launch of Fire Service Week

Shivamogga, April 14: Firefighters’ Martyrs Day was observed on April 14 at the Fire Station in Shivamogga city.

The program was held under the leadership of the Regional Fire Officer of Shivamogga Division, the District Fire Officer, and the Station Officers in charge. A two‑minute silence was observed to pay homage to the martyr firefighters.

Procession: Following the ceremony, the Fire Service Week program was launched. Officers and staff conducted a procession along the city’s main roads.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *