ಶಿವಮೊಗ್ಗ (shivamogga), ಜುಲೈ 09 : ಶಿವಮೊಗ್ಗ ನಗರದ ಮಾನಸ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಗಿದ್ದ ಯುವಕನೋರ್ವ, ಆಸ್ಪತ್ರೆಯಿಂದ ಕಣ್ಮರೆಯಾಗಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆ ಅರಕಲಗೂಡ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದ ನಿವಾಸಿ ಧನಂಜಯ ಕುಮಾರ್ (30) ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ.
ಸದರಿ ಯುವಕನು ಮಾನಸಿಕ ಅಸ್ವಸ್ಥನಾಗಿದ್ದು, ಜೂನ್ 26 ರಂದು ಶಿವಮೊಗ್ಗದ ಮಾನಸ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಕರೆದುಕೊಂಡು ಬರಲಾಗಿತ್ತು. ಈ ವೇಳೆ ಆತ ಆಸ್ಪತ್ರೆಯಿಂದ ಕಾಣೆಯಾಗಿದ್ದಾನೆ.
ಚಹರೆ : 5.2 ಅಡಿ ಎತ್ತರ, ಕೋಲು ಮುಖ, ಕಪ್ಪು ಮೈಬಣ್ಣ ಹೊಂದಿದ್ದು, ಎಡಗೈ ಮೇಲೆ ಹಳೆಯ ಗಾಯದ ಗುರುತು ಇರುತ್ತದೆ. ಕಾಣೆಯಾದ ವೇಳೆ ಬೂದು ಬಣ್ಣದ ತುಂಬುತೋಳಿನ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಸುಳಿವು ಪತ್ತೆಯಾದಲ್ಲಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9480803345 /7349604078 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಜುಲೈ 09 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆ ತಿಳಿಸಿದೆ.
A young man from Hassan who had come to Manasa Hospital in Shivamogga for treatment goes missing: Police appeal for help in finding him | Shivamogga, July 09: An incident has occurred where a young man who was brought to Manasa Hospital in Shivamogga city for treatment has gone missing from the hospital. Dhananjaya Kumar (30), a resident of Byadarahalli village in Arakalguda taluk of Hassan district, has been identified as the missing young man.

