shimoga rain news | ಮಲೆನಾಡಿನಲ್ಲಿ ತಗ್ಗಿದ ಮುಂಗಾರು ಮಳೆ : ಡ್ಯಾಂಗಳ ಒಳಹರಿವಿನಲ್ಲಿ ಇಳಿಕೆ

shimoga rain news

ಶಿವಮೊಗ್ಗ (shivamogga), ಜುಲೈ 09: ಮಲೆನಾಡಿನಲ್ಲಿ ಮುಂಗಾರು ಮಳೆಯ ಅಬ್ಬರ ಕೊಂಚ ಇಳಿಕೆಯಾಗಿದೆ. ಇದರಿಂದ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ತುಂಗಾ, ಭದ್ರಾ ಜಲಾಶಯಗಳ ಒಳ ಹರಿವು ಕಡಿಮೆಯಾಗಿದೆ.

ಜುಲೈ 09 ರ ಬೆಳಿಗ್ಗೆ 8 ಗಂಟೆಯ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂ ಒಳಹರಿವು 36,867 ಕ್ಯೂಸೆಕ್ ಇದೆ. ನಿನ್ನೆ ಈ ಪ್ರಮಾಣ 41,792 ಕ್ಯೂಸೆಕ್ ನಷ್ಟಿತ್ತು.

ಹೊರಹರಿವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಡ್ಯಾಂನ ನೀರಿನ ಮಟ್ಟ 1760.85 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 1795.90 ಅಡಿಯಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ 35 ಅಡಿಯಷ್ಟು ಕಡಿಮೆ ನೀರು ಸಂಗ್ರಹವಾಗಿದೆ.

ತುಂಗಾ ಡ್ಯಾಂ ಒಳಹರಿವು 38,413 ಕ್ಯೂಸೆಕ್ ಇದ್ದು, ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಒಳಹರಿವಿನಷ್ಟೆ ನೀರನ್ನು ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ಬಿಡಲಾಗುತ್ತಿದೆ.

ಭದ್ರಾ ಜಲಾಶಯದ ಒಳಹರಿವು 16,304 ಕ್ಯೂಸೆಕ್ ಇದ್ದು, 316 ಕ್ಯೂಸೆಕ್ ಹೊರಹರಿವಿದೆ. ಡ್ಯಾಂ ನೀರಿನ ಮಟ್ಟ 144 ಅಡಿ 7 ಇಂಚು ಇದೆ (ಗರಿಷ್ಠ ಮಟ್ಟ : 186). ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 172 ಅಡಿ 8 ಇಂಚು ಇತ್ತು.

ಮಳೆ ವಿವರ : 09/07/2026 ರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಮಾಣಿಯಲ್ಲಿ 111 ಮಿಲಿ ಮೀಟರ್ (ಮಿ.ಮೀ.), ಯಡೂರು 79 ಮಿ.ಮೀ., ಹುಲಿಕಲ್ 93 ಮಿ.ಮೀ., ಮಾಸ್ತಿಕಟ್ಟೆ 126 ಮಿ.ಮೀ., ಚಕ್ರಾ 123 ಮಿ.ಮೀ. ಹಾಗೂ ಸಾವೇಹಕ್ಲುವಿನಲ್ಲಿ 108 ಮಿ.ಮೀ. ಮಳೆಯಾಗಿದೆ.

Monsoon rains in Malnadu reduced: Inflows in dams reduced

Shivamogga, July 09: The monsoon rains in Malnadu have reduced slightly. Due to this, the inflows in major reservoirs like Linganamakki, Tunga, Bhadra reservoirs have reduced.

As of 8 am on July 09, the inflow in Linganamakki dam, the main hydroelectric power generation center of the state, is 36,867 cusecs. Yesterday, this amount was 41,792 cusecs.

The outflow has been completely stopped. The current water level in the dam is 1760.85 feet (maximum level: 1819). Last year, the water level in the dam was 1795.90 feet on the same day. Compared to last year, this year, there has been 35 feet less water storage.

The inflow of Tunga Dam is 38,413 cusecs, and since the dam has already reached its maximum level, only the inflow water is being released to Tungabhadra reservoir in Hospet.

The inflow of Bhadra reservoir is 16,304 cusecs, and the outflow is 316 cusecs. The dam water level is 144 feet 7 inches (maximum level: 186). Last year, the dam water level was 172 feet 8 inches on the same day.

Rainfall details: In the last 24 hours ending at 8 am on 09/07/2026, the areas under the Western Ghats range such as Mani received 111 millimeters (mm), Yadoor 79 mm, Hulikal 93 mm, Mastikatte 126 mm, Chakra 123 mm. And 108 mm of rain has fallen in Savehaklu.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *