ಶಿವಮೊಗ್ಗ (shivamogga), ಅಕ್ಟೋಬರ್ 20: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಐವರನ್ನು ಶಿವಮೊಗ್ಗದ ತುಂಗಾ ನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ, ನಗರದ ಹೊರವಲಯ ಅನುಪಿನಕಟ್ಟೆ ಬಳಿ ನಡೆದಿದೆ.
ಅನುಪಿನಕಟ್ಟೆಯ ತುಂಗಾ ಮೇಲ್ದಂಡೆ ನಾಲೆಯ ಸಮೀಪ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಕುರಿತಂತೆ ಲಭ್ಯವಾದ ಖಚಿತ ವರ್ತಮಾನದ ಆಧಾರದ ಮೇರೆಗೆ, ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿಗಳಿಂದ 61,500 ರೂ. ಮೌಲ್ಯದ 1 ಕೆಜಿ 230 ಗ್ರಾಂ ತೂಕದ ಗಾಂಜಾ ಹಾಗೂ 400 ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ಸ್’ಪೆಕ್ಟರ್ ಕೆ ಟಿ ಗುರುರಾಜ್ ನೇತೃತ್ವದ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದೆ. ಆರೋಪಿಗಳ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆಯಡಿ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Ganja Sale Near Anupinakatte in Shivamogga: Five Arrested! | Shivamogga, October 20: Police from the Tunga Nagar station in Shivamogga have arrested five individuals on charges of selling ganja (cannabis). The incident took place near Anupinakatte, on the outskirts of the city.

