shimoga news | ಬಾಲಕನಿಗೆ ಸ್ಕೂಟರ್ ಚಾಲನೆಗೆ ಅವಕಾಶ : ಶಿವಮೊಗ್ಗದ ಮಹಿಳೆಗೆ 26,500 ರೂ. ದಂಡ!

court - fine

ಶಿವಮೊಗ್ಗ (shivamogga), ಅಕ್ಟೋಬರ್ 20: ಬಾಲಕನಿಗೆ ಜುಪಿಟರ್ ಸ್ಕೂಟರ್ ಓಡಿಸಲು ಅವಕಾಶ ನೀಡಿದ ಸ್ಕೂಟರ್ ಮಾಲೀಕರಿಗೆ, ಶಿವಮೊಗ್ಗದ 4 ನೇ ಹೆಚ್ಚುವರಿ ಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು 26,500 ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

ಘಟನೆ ಹಿನ್ನೆಲೆ : ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಸಬ್ ಇನ್ಸ್’ಪೆಕ್ಟರ್ ಸ್ವಪ್ನಾ ಅವರು 9-10-2026 ರಂದು ನಗರದ ಆಲ್ಕೊಳ ಸರ್ಕಲ್ ಬಳಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದರು.

ಈ ವೇಳೆ ವಿನೋಬನಗರ ಪೊಲೀಸ್ ಚೌಕಿ ರಸ್ತೆ ಕಡೆಯಿಂದ ಆಲ್ಕೊಳ ಸರ್ಕಲ್ ಕಡೆಗೆ ಆಗಮಿಸಿದ ಜುಪಿಟರ್ ಸ್ಕೂಟಿಯನ್ನು ನಿಲ್ಲಿಸಿ ಪರಿಶೀಲಿಸಿದ್ದಾರೆ.

ಈ ವೇಳೆ ಸ್ಕೂಟಿ ಚಾಲನೆ ಮಾಡುತ್ತಿದ್ದುದು ಬಾಲಕನಾಗಿರುವುದು ಕಂಡುಬಂದಿದೆ. ಆಲ್ಕೋಳದ ಕಟ್ಟೆಸುಬ್ಬಣ್ಣ ಕಲ್ಯಾಣ ಮಂಟಪ ರಸ್ತೆಯ ನಿವಾಸಿಯಾದ ಮಹಿಳೆಯೋರ್ವರು, ಬಾಲಕನಿಗೆ ಸ್ಕೂಟಿ ಓಡಿಸಲು ಅವಕಾಶ ನೀಡಿದ್ದು ಪತ್ತೆಯಾಗಿತ್ತು.

ಈ ಸಂಬಂಧ ನಿಯಮಾನುಸಾರ ಮೋಟಾರ್ ವಾಹನ ಕಾಯ್ದೆಯಡಿ, ಸ್ಕೂಟರ್‌ ಮಾಲೀಕರಾದ ಮಹಿಳೆ ವಿರುದ್ದ ದೂರು ದಾಖಲಿಸಿಕೊಂಡಿದ್ದರು. ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.

Allowing a minor to ride a scooter: Woman in Shivamogga fined Rs 26,500! | Shivamogga, October 20: The 4th Additional CJ ​​and JMFC Court in Shivamogga has imposed a fine of Rs 26,500 on the owner of a ‘Jupiter’ scooter for allowing a minor boy to ride the vehicle.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *