shimoga drinking water news | ಶಿವಮೊಗ್ಗ ನಗರದ ವಿವಿಧೆಡೆ ಅಕ್ಟೋಬರ್ 25 ರ ಬೆಳಿಗ್ಗೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ!

shimoga news | Drinking water supply disruption in Shivamogga city ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

ಶಿವಮೊಗ್ಗ (shivamogga), ಅಕ್ಟೋಬರ್ 24: ಶಿವಮೊಗ್ಗ ನಗರದ ವಿವಿಧೆಡೆ ಬೆಳಿಗ್ಗೆಯ ಅವಧಿಯಲ್ಲಿ ಕುಡಿಯುವ ನೀರು ಸರಬರಾಜಾಗುವ ಪ್ರದೇಶಗಳಲ್ಲಿ, ಅಕ್ಟೋಬರ್ 25 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲ ಮಂಡಳಿ ಆಡಳಿತ ತಿಳಿಸಿದೆ.

ಮಂಡ್ಲಿ ಪ್ರದೇಶದಲ್ಲಿರುವ ಕೃಷ್ಣ ರಾಜೇಂದ್ರ ಜಲ ಶುದ್ದೀಕರಣ ಘಟಕ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ, ವಿದ್ಯುತ್ ಸರಬರಾಜು ಮಾಡುವ 110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಅಳವಡಿಸಿರುವ ಬ್ರೇಕರ್ ನಲ್ಲಿ ದಿಡೀರ್ ತಾಂತ್ರಿಕ ಸಮಸ್ಯೆ ಎದುರಾಗಿದೆ.

ಅಕ್ಟೋಬರ್ 24 ರ ಸಂಜೆ 6 ಗಂಟೆಯಿಂದಲೆ ವಿದ್ಯುತ್ ಸರಬರಾಜಿನಲ್ಲಿ ನಿರಂತರವಾಗಿ ಅಡಚಣೆಯಾಗುತ್ತಿದೆ. ಈ ಕಾರಣದಿಂದ ಜಲ ಶುದ್ದೀಕರಣ ಘಟಕಕ್ಕೆ ವಿದ್ಯುತ್ ಸರಬರಾಜು ಇಲ್ಲವಾಗಿದೆ.

ಈ ಹಿನ್ನೆಲೆಯಲ್ಲಿ ಅಕ್ಟೋಬರ್ 25 ರ ಬೆಳಿಗ್ಗೆಯ ಅವಧಿಯಲ್ಲಿ, ಕುಡಿಯುವ ನೀರು ಸರಬರಾಜಾಗುವ ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಜಲ ಮಂಡಳಿ ಎಂಜಿನಿಯರ್ ಜೀವನ್ ಅವರು ಮನವಿ ಮಾಡಿದ್ದಾರೆ.

Disruption in drinking water supply in various parts of Shivamogga city on the morning of October 25! | | Shivamogga, October 24: The Water Board administration has announced that there will be a disruption in the drinking water supply on October 25 in areas of Shivamogga city that typically receive water during the morning hours.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *