ಶಿವಮೊಗ್ಗ (shivamogga), ಅಕ್ಟೋಬರ್ 23: ಹಾಸ್ಟೆಲ್ ನಲ್ಲಿದ್ದ ಯುವತಿಗೆ ಕಿರುಕುಳ ನೀಡುತ್ತಿದ್ದ ಯುವಕನೋರ್ವನಿಗೆ, ಮಹಿಳೆಯರ ಸಂರಕ್ಷಣೆಗಿರುವ ‘ಅಕ್ಕ ಪಡೆ’ ಖಡಕ್ ಎಚ್ಚರಿಕೆ ನೀಡಿದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಮ್ಯಾಕ್ಸ್ ಆಸ್ಪತ್ರೆ ಸಮೀಪದ ಹಾಸ್ಟೆಲ್ ವೊಂದರಲ್ಲಿ ಯುವತಿಯೋರ್ವಳು ನೆಲೆಸಿದ್ದಳು. ಸದರಿ ಯುವತಿಗೆ ಯುವಕನೋರ್ವ ತೊಂದರೆ ಕೊಡುತ್ತಿದ್ದ.
ಈ ಕುರಿತಂತೆ ‘ಅಕ್ಕ ಪಡೆ’ಗೆ ಮಾಹಿತಿ ಲಭ್ಯವಾಗಿತ್ತು. ಇದರ ಆಧಾರದ ಮೇಲೆ ಸ್ಥಳಕ್ಕೆ ಆಗಮಿಸಿದ ‘ಅಕ್ಕ ಪಡೆ’ ಸಿಬ್ಬಂದಿಗಳು ಯುವಕನನ್ನು ಕರೆಯಿಸಿಕೊಂಡು ಬುದ್ದಿ ಮಾತು ಹೇಳಿದೆ. ಯುವತಿಗೆ ತೊಂದರೆ ಕೊಡುವುದನ್ನು ಮುಂದುವರೆಸಿದರೆ ಕಾನೂನು ರೀತ್ಯ ಕಠಿಣ ಕ್ರಮಕೈಗೊಳ್ಳುವ ಖಡಕ್ ಎಚ್ಚರಿಕೆ ನೀಡಿ ಕಳುಹಿಸಿದೆ.
Harassment of a young woman in a Shivamogga : ‘Akka Pade’ issues a stern warning to the man! | Shivamogga, October 23: An incident has occurred in Shivamogga city where the ‘Akka Pade’—a group dedicated to the protection of women—issued a stern warning to a man who had been harassing a young woman residing in a hostel.

