ಶಿವಮೊಗ್ಗ (shivamogga), ಅಕ್ಟೋಬರ್ 26: ನಂಬರ್ ಪ್ಲೇಟ್ ಇಲ್ಲದೆ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ, ಶಿವಮೊಗ್ಗ ಟ್ರಾಫಿಕ್ ಪೊಲೀಸರು ದಿಡೀರ್ ಕಾರ್ಯಾಚರಣೆ ಮೂಲಕ ಶಾಕ್ ನೀಡಿದ್ದಾರೆ!
ಅಕ್ಟೋಬರ್ 26 ರಂದು ಸಂಚಾರ ಸುರಕ್ಷತೆಗೆ ಸಂಬಂಧಿಸಿದಂತೆ, ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದರು. ಈ ವೇಳೆ ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುತ್ತಿದ್ದ 72 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಂಬರ್ ಪ್ಲೇಟ್ ಇಲ್ಲದೆ ಬೈಕ್ ಓಡಿಸುತ್ತಿದ್ದ ಚಾಲಕರು / ಮಾಲೀಕರ ವಿರುದ್ದ ಐಎಂವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ದ್ವಿಚಕ್ರ ವಾಹನಗಳಿಗೆ ಮಾನ್ಯತೆ ಹೊಂದಿದ ನಂಬರ್ ಪ್ಲೇಟ್ ಅಳವಡಿಸಿ ಚಲಾಯಿಸಬೇಕು ಎಂದು ಸೂಚಿಸಿದ್ದಾರೆ. ಟ್ರಾಫಿಕ್ ಇನ್ಸ್’ಪೆಕ್ಟರ್ ದೇವರಾಜ್ ಅವರ ನೇತೃತ್ವದಲ್ಲಿ ಸದರಿ ಕಾರ್ಯಾಚರಣೆ ನಡೆಸಲಾಗಿದೆ.
Surprise Operation by Shivamogga Traffic Police: 72 Two-Wheelers Without Number Plates Seized! | Shivamogga, October 26: The Shivamogga Traffic Police have dealt a shock to riders of two-wheelers operating without number plates through a surprise operation!
On October 26, the traffic police conducted a special drive focused on road safety. During this operation, they seized 72 two-wheelers that were being driven without number plates.

