kargal news update | ಕಾರ್ಗಲ್ ಪೊಲೀಸರ ಪ್ರಾಮಾಣಿಕತೆ : ರಸ್ತೆಯಲ್ಲಿ ಸಿಕ್ಕ ಬ್ಯಾಗ್ ನಲ್ಲಿದ್ದ ಚಿನ್ನಾಭರಣ, ಹಣ ವಾರಸುದಾರರಿಗೆ ಹಸ್ತಾಂತರ!

Gold Ornaments and Cash Found in a Bag on the Road: Kargal Police Demonstrate Honesty by Returning Items to the Rightful Owner! | Sagara, November 09: In an act demonstrating both honesty and dedication to duty, the police from the Kargal station in Sagara taluk returned a bag—containing cash and gold ornaments found on the road—to its rightful owner.

ಸಾಗರ (sagara), ನವೆಂಬರ್ 09: ರಸ್ತೆಯಲ್ಲಿ ಸಿಕ್ಕಿದ ಹಣ ಹಾಗೂ ಚಿನ್ನಾಭರಣವಿದ್ದ ಬ್ಯಾಗ್ ನ್ನು, ಸಾಗರ ತಾಲೂಕು ಕಾರ್ಗಲ್ ಠಾಣೆ ಪೊಲೀಸರು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಹಾಗೂ ಕರ್ತವ್ಯ ನಿಷ್ಠೆ ಮೆರೆದ ಘಟನೆ ನಡೆದಿದೆ.

ಏನೀದು ಘಟನೆ? : ಕಾರ್ಗಲ್ ಪೊಲೀಸ್ ಠಾಣೆ ಸಬ್ ಇನ್ಸ್’ಪೆಕ್ಟರ್ ಶ್ರೀಪತಿ ಗಿನ್ನಿ ಹಾಗೂ ಸಿಬ್ಬಂದಿಗಳು ಠಾಣಾ ವ್ಯಾಪ್ತಿಯ ಜೋಗದ ಭಾಗದಲ್ಲಿ ಗಸ್ತು ಕಾರ್ಯ ನಡೆಸುತ್ತಿದ್ದರು.

ಈ ವೇಳೆ ಅನಾಮಧೇಯ ಬ್ಯಾಗ್ ವೊಂದು ರಸ್ತೆ ಪಕ್ಕ ಬಿದ್ದಿರುವುದು ಕಂಡುಬಂದಿತ್ತು. ಸದರಿ ಬ್ಯಾಗ್ ಪರಿಶೀಲನೆ ಮಾಡಿದಾಗ ಅದರೊಳಗೆ ಚಿನ್ನಾಭರಣ, ಹಣ, ಬೆಲೆಬಾಳುವ ವಸ್ತುಗಳು, ಆಧಾರ್ ಕಾರ್ಡ್ ಇರುವುದು ಪತ್ತೆಯಾಗಿತ್ತು.

ಪೊಲೀಸರು ಆಧಾರ್ ಕಾರ್ಡ್ ನಲ್ಲಿದ್ದ ಮೊಬೈಲ್ ನಂಬರ್ ಮೂಲಕ ವಾರಸುದಾರರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರು. ಅವರನ್ನು ಸ್ಥಳಕ್ಕೆ ಕರೆಯಿಸಿಕೊಂಡು,  ಸದರಿ ಬ್ಯಾಗ್ ನ್ನು ಹಿಂದಿರುಗಿಸಿದ್ದಾರೆ.
ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆ ಮರೆದ  ಪಿಎಸ್ಐ ಶ್ರೀಪತಿ ಗಿನ್ನಿ, ಸಿಬ್ಬಂದಿಗಳಾದ ಅಣ್ಣಪ್ಪ, ಪುರುಷೋತ್ತಮ್, ಮಲ್ಲಪ್ಪರವರಿಗೆ ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸಿದೆ.

Gold Ornaments and Cash Found in a Bag on the Road: Kargal Police Demonstrate Honesty by Returning Items to the Rightful Owner! | Sagara, November 09: In an act demonstrating both honesty and dedication to duty, the police from the Kargal station in Sagara taluk returned a bag—containing cash and gold ornaments found on the road—to its rightful owner.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *