deepavali celebration | ದೀಪಾವಳಿ ಹಬ್ಬದಲ್ಲಿ ಪಟಾಕಿಸಿಡಿಸುವಾಗ ಮಕ್ಕಳೇ ಎಚ್ಚರಿಕೆವಹಿಸಿ – ಸುರಕ್ಷತೆಯೇ ಮೊದಲ ಆದ್ಯತೆ! – ಡಾ ಪ್ರದೀಪ್ ಡಿಮೆಲ್ಲೋ.

Children under 18 years of age banned from fireworks shops in Shivamogga district! ಶಿವಮೊಗ್ಗ ಜಿಲ್ಲೆಯ ಪಟಾಕಿ ಮಾರಾಟ ಅಂಗಡಿಗಳಲ್ಲಿ 18 ವರ್ಷದೊಳಗಿನ ಮಕ್ಕಳ ಬಳಕೆ ನಿಷೇಧ

ಶಿವಮೊಗ್ಗ (shimoga): ದೀಪಾವಳಿ ಎಂದರೆ ಬೆಳಕಿನ ಹಬ್ಬ, ಸಂತೋಷದ ಹಬ್ಬಹಾಗೂ ಸಂಭ್ರಮದ ಹಬ್ಬ. ಈ ಸಂದರ್ಭದಲ್ಲಿ ಮಕ್ಕಳು ಪಟಾಕಿ ಸಿಡಿಸುವುವಾಗ ಹೆಚ್ಚಿನ ಜಾಗ್ರತೆ ವಹಿಸುವುದು ಅತ್ಯಗತ್ಯ ಎಂದು ಕೆ ಪಿ ಸಿ ಸಿ ವೈದ್ಯರ ಘಟಕದ ರಾಜ್ಯ ಉಪಾಧ್ಯಕ್ಷ ಹಾಗು ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಡಾ ಪ್ರದೀಪ್ ಡಿಮೆಲೋ ಅವರು ಸಲಹೆ ನೀಡಿದ್ದಾರೆ.

ಹಬ್ಬದ ಆಚರಣೆಯಲ್ಲಿ ಮಕ್ಕಳು ಮಕ್ಕಳು ಪಟಾಕಿ ಸಿಡಿಸಲು ಹೆಚ್ಚಿನ ಆಸಕ್ತಿ ತೋರುತ್ತಾರೆ. ಆದರೆಪಟಾಕಿಗಳಿಂದ ಉಂಟಾಗುವ ಅಪಘಾತಗಳು, ಸುಟ್ಟ ಗಾಯಗಳು ಹಾಗೂ ಪರಿಸರ ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಕುರಿತು ಪೋಷಕರು ಹೆಚ್ಚಿನ ಜಾಗ್ರತೆ ವಹಿಸುವುದು ಅತ್ಯಗತ್ಯ. ಮಕ್ಕಳು ಪಟಾಕಿ ಸಿಡಿಸುವಾಗ ಪೋಷಕರು ಹಾಗೂ ಹಿರಿಯರ ಮಾರ್ಗದರ್ಶನವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದ್ದಾರೆ.

ಪಟಾಕಿ ಸಿಡಿಸುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆಗಳು:
  1. ಮಕ್ಕಳು ಎಂದಿಗೂ ಒಂಟಿಯಾಗಿ ಪಟಾಕಿ ಸಿಡಿಸಬಾರದು.ಹಿರಿಯರ ಮೇಲ್ವಿಚಾರಣೆ ಕಡ್ಡಾಯವಾಗಿರಲಿ.
  2. ಪಟಾಕಿ ಹಚ್ಚುವಾಗ ಹತ್ತಿಯ ಬಟ್ಟೆಗಳನ್ನು ಧರಿಸಬೇಕು.ಸಡಿಲವಾದ ಹಾಗೂ ಸಿಂಥೆಟಿಕ್ ಬಟ್ಟೆಗಳನ್ನು ಧರಿಸಬಾರದು.
  3. ಪಟಾಕಿ ಸಿಡಿಸುವಾಗ ಕೈಯಲ್ಲಿ ಹಿಡಿದುಕೊಳ್ಳಬಾರದು.ನೆಲದ ಮೇಲೆ ಇಟ್ಟು ಸುರಕ್ಷಿತ ಅಂತರದಿಂದ ಹಚ್ಚಬೇಕು.
  4. ಪಟಾಕಿ ಹಚ್ಚಲು ಉದ್ದನೆಯ ಊದುಬತ್ತಿ (ಸ್ಪಾರ್ಕ್ಲರ್)ಬಳಸುವುದು ಉತ್ತಮ.
  5. ಪಟಾಕಿ ಸಿಡಿಸುವ ಸ್ಥಳದಲ್ಲಿ ನೀರು ಅಥವಾ ಮರಳಿನಬಕೆಟ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
  6. ಸಿಡಿಯದ ಪಟಾಕಿಗಳನ್ನು ಮತ್ತೆ ಹಚ್ಚಲು ಪ್ರಯತ್ನಿಸಬಾರದು.ಅವುಗಳ ಹತ್ತಿರ ಹೋಗದೆ ಹಿರಿಯರಿಗೆ ತಿಳಿಸಬೇಕು.
  7. ಪಟಾಕಿಗಳನ್ನು ಮನೆಯ ಒಳಗೆ, ವಾಹನಗಳ ಹತ್ತಿರ,ವಿದ್ಯುತ್ ತಂತಿಗಳ ಕೆಳಗೆ ಅಥವಾ ಜನಸಂದಣಿಇರುವ ಸ್ಥಳಗಳಲ್ಲಿ ಸಿಡಿಸಬಾರದು.
  8. ಪಟಾಕಿಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳಬಾರದು ಹಾಗೂ ಬೆಂಕಿಯ ಸಮೀಪ ಸಂಗ್ರಹಿಸಬಾರದು.
  9. ಕಣ್ಣು ಮತ್ತು ಕಿವಿಗಳ ಸುರಕ್ಷತೆಗೆ ವಿಶೇಷ ಗಮನ ನೀಡಬೇಕು.
  10. ಯಾವುದೇ ಅಪಘಾತ ಸಂಭವಿಸಿದಲ್ಲಿ ತಕ್ಷಣ ಹಿರಿಯರಿಗೆತಿಳಿಸಿ ವೈದ್ಯಕೀಯ ನೆರವು ಪಡೆಯಬೇಕು.
ಪರಿಸರ ಸಂರಕ್ಷಣೆಯೂ ನಮ್ಮ ಜವಾಬ್ದಾರಿ

ಪಟಾಕಿಗಳಿಂದ ವಾಯು ಮತ್ತು ಶಬ್ದ ಮಾಲಿನ್ಯ ಉಂಟಾಗಿಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗೂ ಉಸಿರಾಟದ ಸಮಸ್ಯೆ ಇರುವವರಿಗೆ ತೊಂದರೆಯಾಗಬಹುದು. ಅಲ್ಲದೆ ಪ್ರಾಣಿ-ಪಕ್ಷಿಗಳಿಗೂಭಯ ಮತ್ತು ನೋವು ಉಂಟಾಗುತ್ತದೆ. ಆದ್ದರಿಂದ ಕಡಿಮೆ ಶಬ್ದಹಾಗೂ ಕಡಿಮೆ ಹೊಗೆ ಉಂಟುಮಾಡುವ ಹಸಿರು ಪಟಾಕಿಗಳಿಗೆಆದ್ಯತೆ ನೀಡಬೇಕು. ಸಾಧ್ಯವಾದಷ್ಟು ಪಟಾಕಿಗಳ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿ ದೀಪಾವಳಿ ಆಚರಿಸಬೇಕು ಎಂದು ಅವರು ಮನವಿ ಮಾಡಿದರು.

Children, be careful when bursting firecrackers during the Deepavali festival – safety is the top priority! – Dr. Pradeep D’Mello.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *