ಶಿವಮೊಗ್ಗ (shivamogga), ನವೆಂಬರ್ 11: ಜಮೀನಿನ ಖಾತೆ ಮಾಡಿಕೊಡಲು ಸತಾಯಿಸುತ್ತಿರುವ ತಹಶೀಲ್ದಾರ್ ಕಚೇರಿಯ ಕ್ರಮದಿಂದ ಬೇಸತ್ತ ರೈತರೋರ್ವರು, ನವೆಂಬರ್ 11 ರಂದು ಬೆಳಿಗ್ಗೆ ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಮರವೇರಿ ಕುಳಿತುಕೊಂಡ ಘಟನೆ ನಡೆದಿದೆ.
ರಾಮಿನಕೊಪ್ಪ ಗ್ರಾಮದ ರೈತ ನಾಗರಾಜ್ ಎಂಬುವರೆ ಮರವೇರಿ ಕುಳಿತುಕೊಂಡವರಾಗಿದ್ದಾರೆ. ಇವರನ್ನು ಮರದಿಂದ ಕೆಳಗಿಳಿಸಲು ಜೊತೆಯಲ್ಲಿದ್ದ ಗ್ರಾಮಸ್ಥರು, ನಾಗರಿಕರು ಹರಸಾಹಸ ನಡೆಸಿದರು. ಪೊಲೀಸರು, ಅಗ್ನಿಶಾಮಕ ದಳದ ತಂಡ ಕೂಡ ಸ್ಥಳಕ್ಕಾಗಮಿಸಿದೆ.
ಅಗ್ನಿಶಾಮಕದ ದಳದ ಠಾಣಾಧಿಕಾರಿ ಹುಸೇನ್ ಅವರ ನೇತೃತ್ವದ ತಂಡ, ರೈತನನ್ನು ಮರದಿಂದ ಕೆಳಕ್ಕಿಳಸಲು ಹರಸಾಹಸ ನಡೆಸುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಮರದಿಂದ ಕೆಳಕ್ಕಿಳಿಯುವುದಿಲ್ಲ. ಸ್ಥಳಕ್ಕೆ ಡಿಸಿ ಆಗಮಿಸಬೇಕು. ತಮ್ಮ ಅಹವಾಲು ಆಲಿಸಬೇಕು. ಬಲವಂತವಾಗಿ ಮರದಿಂದ ಕೆಳಕ್ಕಿಳಿಸಲು ಮುಂದಾದರೆ, ಕೆಳಕ್ಕೆ ಬೀಳುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿ ಪರಿಣಮಿಸಿದೆ!
ಕಾರಣವೇನು? : ರಾಮಿನಕೊಪ್ಪ ಗ್ರಾಮದ ನಾಗರಾಜ್ ಸೇರಿದಂತೆ ಇತರೆ 11 ಜನ ರೈತರು ತಾವು ಉಳುಮೆ ಮಾಡುತ್ತಿರುವ ಜಮೀನಿಗೆ ಖಾತೆ ಮಾಡಿಕೊಡುವಂತೆ ಕೋರಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸದರಿ ಜಮೀನುಗಳಿಗೆ ಖಾತೆ ಮಾಡಿಕೊಡಲು ತಹಶೀಲ್ದಾರ್ ಕಚೇರಿಯವರು ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು.
ಕಳೆದ ಹಲವು ತಿಂಗಳುಗಳಿಂದ ಕಚೇರಿಗೆ ಅಲೆದಾಡಿದರೂ ಕೆಲಸವಾಗಿರಲಿಲ್ಲ. ಈ ನಡುವೆ ಲಕ್ಷಾಂತರ ರೂ. ಲಂಚ ಕೂಡ ನೀಡಿದ್ದರೂ ಕೆಲಸವಾಗಿರಲಿಲ್ಲ ಎನ್ನಲಾಗಿದೆ. ಮತ್ತೊಂದೆಡೆ, ತಹಶೀಲ್ದಾರ್ ರಾಜೀವ್ ಅವರನ್ನು ಶಿವಮೊಗ್ಗದಿಂದ ವರ್ಗಾವಣೆ ಮಾಡಲಾಗಿತ್ತು. ಇದರ ಮಾಹಿತಿ ಅರಿತ ರೈತರು ಬೆಳಿಗ್ಗೆ ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದರು. ಈ ವೇಳೆ ರೈತ ನಾಗರಾಜ್ ಅವರು ಮರವೇರಿ ಕುಳಿತುಕೊಂಡಿದ್ದಾರೆ. ಜಮೀನಿಗೆ ಖಾತೆ ಮಾಡಿಕೊಡುವವರೆಗೂ ಮರದಿಂದ ಕೆಳಕ್ಕಿಳಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
Shivamogga – Farmer Climbs Tree; Insists on DC’s Presence! | Shivamogga, November 11: Frustrated by the delays from the Tahsildar’s office regarding the formal registration (*khata*) of his land, a farmer climbed a tree located on the premises of the Deputy Commissioner’s (DC) office in Shivamogga city on the morning of November 11. The farmer, identified as Nagaraj from Raminakoppa village, climbed the tree. Fellow villagers and members of the public made strenuous efforts to get him down. The police and a fire brigade team have also arrived at the scene.

