shimoga news | ಶಿವಮೊಗ್ಗ – ಕೊನೆಗೂ ಮರದಿಂದ ಕೆಳಕ್ಕಿಳಿದ ರೈತ!

Shivamogga – Delay in processing land documentation: Farmer climbs a tree on the Deputy Commissioner’s office premises! | Shivamogga, November 11: A farmer, who had climbed a tree on the premises of the Deputy Commissioner’s office in Shivamogga city to protest against officials for delaying the registration (*khata*) of the land he cultivates, has finally been brought down safely by the authorities!

ಶಿವಮೊಗ್ಗ (shivamogga), ನವೆಂಬರ್ 11: ಸಾಗುವಳಿ ಮಾಡುತ್ತಿರುವ ಜಮೀನಿಗೆ ಖಾತೆ ಮಾಡಿಕೊಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ, ನವೆಂಬರ್ 11 ರಂದು ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಮರವೇರಿ ಪ್ರತಿಭಟನೆ ನಡೆಸುತ್ತಿದ್ದ ರೈತನನ್ನು, ಸುರಕ್ಷಿತವಾಗಿ ಕೆಳಕ್ಕಿಳಿಸುವಲ್ಲಿ ಅಧಿಕಾರಿಗಳು ಕೊನೆಗೂ ಸಫಲರಾಗಿದ್ದಾರೆ!

ರಾಮಿನಕೊಪ್ಪ ಗ್ರಾಮದ ಹಿರಿಯ ರೈತ ನಾಗರಾಜ್ ಎಂಬುವರೆ ಮರವೇರಿ ಕುಳಿತು ಪ್ರತಿಭಟಿಸುತ್ತಿದ್ದವರು. ಸರಿಸುಮಾರು ನಾಲ್ಕು ಗಂಟೆಗಳ ಕಾಲ ಅಧಿಕಾರಿಗಳು ನಡೆಸಿದ ಸಂಧಾನದ ನಂತರ, ನಾಗರಾಜ್ ಅವರು ಮರದ ಮೇಲಿಂದ ಕೆಳಕ್ಕಿಳಿದಿದ್ದಾರೆ.  ಹಲವು ಗಂಟೆಗಳ ಕಾಲ ನಡೆದ ಪ್ರಹಸನದಿಂದ, ಡಿಸಿ ಕಚೇರಿ ಆವರಣದಲ್ಲಿ ಭಾರೀ ಜನಜಂಗುಳಿ ನೆರೆದಿತ್ತು.

ಕಾರಣವೇನು? : ರಾಮಿನಕೊಪ್ಪ ಗ್ರಾಮದ ನಾಗರಾಜ್ ಸೇರಿದಂತೆ ಕೆಲ ರೈತರು ತಾವು ಉಳುಮೆ ಮಾಡುತ್ತಿರುವ ಜಮೀನಿಗೆ ದಾಖಲಾತಿ ಮಾಡಿಕೊಡುವಂತೆ ಕೋರಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸದರಿ ಜಮೀನುಗಳಿಗೆ ಖಾತೆ ಮಾಡಿಕೊಡಲು ತಹಶೀಲ್ದಾರ್ ಕಚೇರಿಯವರು ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಅದರಂತೆ ಹಣ ಕೂಡ ಪಾವತಿಸಿದ್ದರು.

ಇಷ್ಟೆಲ್ಲದರ ಹೊರತಾಗಿಯೂ ಜಮೀನುಗಳಿಗೆ ಸೂಕ್ತ ದಾಖಲಾತಿ ಮಾಡಿಕೊಟ್ಟಿರಲಿಲ್ಲ. ಇದರಿಂದ ಬೇಸತ್ತ ನಾಗರಾಜ್ ಅವರು ಡಿಸಿ ಕಚೇರಿ ಆವರಣದ ಮರಮೇರಿ ಕುಳಿತುಕೊಂಡಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿಗಳು ಅವರನ್ನು ಮರದಿಂದ ಕೆಳಕ್ಕಿಳಿಯುವಂತೆ ಮನವಿ ಮಾಡಿದ್ದರು.

ಮತ್ತೊಂದೆಡೆ ನಾಗರಾಜ್ ಅವರು ಜಿಲ್ಲಾಧಿಕಾರಿಗಳು ಸ್ಥಳಕ್ಕಾಗಮಿಸಿ ತಮ್ಮ ಅಹವಾಲು ಆಲಿಸಬೇಕು. ಅಲ್ಲಿಯವರೆಗೂ ಮರದಿಂದ ಕೆಳಕ್ಕಿಳಿಯುವುದಿಲ್ಲ. ಬಲವಂತವಾಗಿ ಕೆಳಕ್ಕಿಳಿಸುವ ಪ್ರಯತ್ನ ಮಾಡಿದರೆ, ಮರದಿಂದ ಕೆಳಕ್ಕೆ ಬೀಳುವುದಾಗಿ ಬೆದರಿಕೆ ಹಾಕಿದ್ದರು.

ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಅಂತಿಮವಾಗಿ ನಾಗರಾಜ್ ಅವರನ್ನು ಮನವೊಲಿಸುವ ಅಧಿಕಾರಿಗಳ ಪ್ರಯತ್ನ ಸಫಲವಾಗಿತ್ತು. ಈ ಹಿನ್ನೆಲೆಯಲ್ಲಿ ನಾಗರಾಜ್ ಅವರು ಮರದಿಂದ ಕೆಳಕ್ಕಿಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾಗರಾಜ್ ಅವರು, ತಾವು ಸಾಗುವಳಿ ಮಾಡುತ್ತಿರುವ ಜಮೀನಿಗೆ ಜಿಲ್ಲಾಧಿಕಾರಿಗಳ ಈ ಹಿಂದಿನ ಆದೇಶದಂತೆ ಕೂಡಲೇ ಖಾತೆ ಮಾಡಿಕೊಡಬೇಕು ಎಂದು ಆಗ್ರಹಿಸಿರುವ ಅವರು, ‘ವಿನಾಕಾರಣ ತಹಶೀಲ್ದಾರ್ ಕಚೇರಿ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ. ಖಾತೆ ಮಾಡಿಕೊಡುವುದಾಗಿ ಹೇಳಿ ಅಧಿಕಾರಿಗಳು ಹಣ ಪಡೆದಿದ್ದಾರೆ. ಆದಾಗ್ಯೂ ಕೆಲಸ ಮಾಡಿಕೊಟ್ಟಿಲ್ಲ’ ಎಂದು ಆರೋಪಿಸಿದ್ದಾರೆ.

Shivamogga – Delay in processing land documentation: Farmer climbs a tree on the Deputy Commissioner’s office premises! | Shivamogga, November 11: A farmer, who had climbed a tree on the premises of the Deputy Commissioner’s office in Shivamogga city to protest against officials for delaying the registration (*khata*) of the land he cultivates, has finally been brought down safely by the authorities!

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *