shimoga KHB office news | ಶಿವಮೊಗ್ಗ ಕೆಹೆಚ್’ಬಿ ಕಚೇರಿ ಆವರಣದಲ್ಲಿ ಪುಂಡ-ಪೋಕರಿಗಳ ಹಾವಳಿ : ಲೈಟ್ ಅಳವಡಿಕೆ, ಪೊಲೀಸ್ ಗಸ್ತಿಗೆ ಪತ್ರ ಬರೆದ ಅಧಿಕಾರಿ!

ಶಿವಮೊಗ್ಗ (shivamogga), ನವೆಂಬರ್ 12: ಶಿವಮೊಗ್ಗ ನಗರದ ಕಲ್ಲಹಳ್ಳಿ 2 ನೇ ಹಂತದ ಬಡಾವಣೆಯಲ್ಲಿರುವ ಕರ್ನಾಟಕ ಗೃಹ ಮಂಡಳಿ (ಕೆಹೆಚ್’ಬಿ) ಕಚೇರಿ ಹಾಗೂ ವಾಣಿಜ್ಯ ಸಂಕೀರ್ಣ ಆವರಣದಲ್ಲಿ ರಾತ್ರಿ ವೇಳೆ ಪುಂಡ-ಪೋಕರಿಗಳ ಹಾವಳಿ ಹೆಚ್ಚಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕಟ್ಟಡ ಆವರಣದಲ್ಲಿ ಖಾಲಿ ಜಾಗ ಹೆಚ್ಚಿದೆ. ಸೂಕ್ತ ವಿದ್ಯುತ್ ದೀಪಗಳ ವ್ಯವಸ್ಥೆಯಿಲ್ಲ. ಈ ಕಾರಣದಿಂದ ರಾತ್ರಿ ವೇಳೆ ಮದ್ಯಪಾನ, ಗಾಂಜಾ ಸೇವನೆ, ಜೂಜಾಟ ಸೇರಿದಂತೆ ನಾನಾ ರೀತಿಯ ಅನೈತಿಕ ಚಟುವಟಿಕೆಗಳ ಅಡ್ಡೆಯಾಗುತ್ತಿದೆ ಎಂಬ ದೂರುಗಳಿವೆ.

ಈ ಹಿನ್ನೆಲೆಯಲ್ಲಿ ಕೆಹೆಚ್’ಬಿ ಎಇಇ ಹರೀಶ್ ಅವರು, ಮಹಾನಗರ ಪಾಲಿಕೆ ಆಡಳಿತ ಹಾಗೂ ವಿನೋಬನಗರ ಪೊಲೀಸ್ ಠಾಣೆಗೆ ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ.

ಕಚೇರಿ ಆವರಣದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆಯಿಲ್ಲದ ಕಾರಣದಿಂದ ರಾತ್ರಿ ವೇಳೆ ಪುಂಡರ ಹಾವಳಿ ಹೆಚ್ಚಾಗಿದೆ. ವಾಣಿಜ್ಯ ಮಳಿಗೆಗಳ ವ್ಯಾಪಾರಿಗಳು ಹಾಗೂ ಗ್ರಾಹಕರಿಗೆ ತೊಂದರೆಯಾಗಿದೆ. ಈ ಕಾರಣದಿಂದ ತುರ್ತುಗತಿಯಲ್ಲಿ ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಸಿ ಅನುಕೂಲ ಕಲ್ಪಿಸಿಕೊಡಬೇಕು ಎಂದು ಪಾಲಿಕೆ ಆಡಳಿತಕ್ಕೆ ಮನವಿ ಮಾಡಿದ್ದಾರೆ.

ವಿನೋಬನಗರ ಪೊಲೀಸ್ ಠಾಣೆಗೆ ಬರೆದಿರುವ ಪತ್ರದಲ್ಲಿ, ಕೆಲ ಯುವಕರು ರಾತ್ರಿ ವೇಳೆ ಮದ್ಯಪಾನ ಮಾಡಿಕೊಂಡು ಗಲಾಟೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಶಾಂತಿ – ಸುವ್ಯವಸ್ಥೆಗೆ ತೊಂದರೆಯಾಗುತ್ತಿದೆ. ಹಾಗೆಯೇ ಕೆಲ ನಾಗರಿಕರು ಕಚೇರಿ ಮುಂಭಾಗದಲ್ಲಿ ಅನದಿಕೃತವಾಗಿ ಕುಳಿತುಕೊಂಡು ತೊಂದರೆ ಕೊಡುತ್ತಿದ್ದಾರೆ. ಈ ಕಾರಣದಿಂದ ಕಚೇರಿ ಆವರಣದಲ್ಲಿ ಪ್ರತಿನಿತ್ಯ ಸೂಕ್ತ ಗಸ್ತು ವ್ಯವಸ್ಥೆ ಮಾಡಬೇಕು ಎಂದು ಕೋರಿದ್ದಾರೆ.

Nuisance by Miscreants on KHB Office Premises in Shivamogga: Official Writes Requesting Installation of Lights and Police Patrols! | Shivamogga, November 12: Allegations have emerged regarding an increase in nuisance caused by miscreants during the night on the premises of the Karnataka Housing Board (KHB) office and commercial complex, located in the 2nd Stage layout of Kallahalli in Shivamogga city.

There is a significant amount of open space within the building premises, and there is a lack of adequate lighting. Consequently, there are complaints that the area has become a hub for various illicit activities at night, including alcohol consumption, the use of ganja (cannabis), and gambling.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *