
ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಪೊಲೀಸರಿಂದ ಸಾರ್ವಜನಿಕ ಸ್ಥಳಗಳಲ್ಲಿ ಬ್ರೀಫಿಂಗ್ : ಕುಂದುಕೊರತೆ ಸಭೆ
ಶಿವಮೊಗ್ಗ, ನ. 12: ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಭಾನುವಾರ ಪೊಲೀಸರು ಸಾರ್ವಜನಿಕ ಸ್ಥಗಳಲ್ಲಿ ಬ್ರೀಫಿಂಗ್ ಸಭೆ ನಡೆಸಿದರು. ಹಾಗೆಯೇ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ನಿವಾಸಿಗಳು ವಾಸಿಸುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿ ಅಹವಾಲು ಆಲಿಸಿದರು.
ಬ್ರೀಫಿಂಗ್: ಶಿವಮೊಗ್ಗ ನಗರದ ವಿನಾಯಕ ಸರ್ಕಲ್, ವಿನೋಬನಗರದ ಶಿವಾಲಯ, KSRTC ಡಿಪೋ, ಓಲ್ಡ್ ಬಾರ್ ಲೈನ್ ರೋಡ್, ಜಯನಗ ರ, ತಾಲೂಕಿನ ಕುಂಸಿ ಗ್ರಾಮ, ಭದ್ರಾವತಿಯ ರೈಲ್ವೆ ಸ್ಟೇಷನ್, ತೀರ್ಥಹಳ್ಳಿಯ ರಥ ಬೀದಿ, ಆಗುಂಬೆ,
ಹೊಸನಗರ ತಾಲೂಕಿನ ರಿಪ್ಪನ್ ಪೇಟೆ, ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಟೌನ್, ಸೊರಬ ಟೌನ್, ತಾಲೂಕಿನ ಕಾರ್ಗಲ್ ನ ತಲಕಳಲೆಯಲ್ಲಿ ಆಯಾ ಠಾಣೆಗಳ ಬ್ರೀಫಿಂಗ್ ಸಭೆಗಳು ನಡೆದವು.
ಠಾಣೆಗಳ ಠಾಣಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದವು. ನಿರ್ವಹಿಸಬೇಕಾದ ಕರ್ತವ್ಯ ಮತ್ತು ಮೇಲಾಧಿಕಾರಿಗಳ ಸೂಚನೆಗಳ ಬಗ್ಗೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.
ಕುಂದುಕೊರತೆ ಸಭೆ: ಜಿಲ್ಲೆಯ ಪ್ರತಿಯೊಂದು ಠಾಣಾ ವ್ಯಾಪ್ತಿಯ ಪರಿಶಿಷ್ಟ ಜಾತಿ – ಪಂಗಡಗಳ ನಿವಾಸಿಗಳು ವಾಸಿಸುತ್ತಿರುವ ಪ್ರದೇಶಗಳಲ್ಲಿ, ಇನ್ಸ್’ಪೆಕ್ಟರ್ ಹಾಗೂ ಸಬ್ ಇನ್ಸ್’ಪೆಕ್ಟರ್ ಗಳ ನೇತೃತ್ವದಲ್ಲಿ ಕುಂದುಕೊರತೆ ಸಭೆಗಳು ನಡೆದವು.
ಈ ವೇಳೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮುದಾಯಗಳ ಕುಂದುಕೊರತೆಗಳನ್ನು ಪೊಲೀಸರು ಆಲಿಸಿದರು. ನಾಗರೀಕರ ಅಹವಾಲುಗಳಿಗೆ ಕಾಲಮಿತಿಯೊಳಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.