ಇಬ್ಬರು ಮಕ್ಕಳೊಂದಿಗೆ ಕಣ್ಮರೆಯಾದ ತಾಯಿ : ಮಾಹಿತಿ ನೀಡಲು ಪೊಲೀಸರ ಮನವಿ

Missing mother with two children: Police appeal for information ಇಬ್ಬರು ಮಕ್ಕಳೊಂದಿಗೆ ಕಣ್ಮರೆಯಾದ ತಾಯಿ : ಮಾಹಿತಿ ನೀಡಲು ಪೊಲೀಸರ ಮನವಿ

ಶಿವಮೊಗ್ಗ, ಡಿ. 01: ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬುದ್ದ ನಗರ 1 ನೇ ಕ್ರಾಸ್ ನ ಮಹಿಳೆಯೋರ್ವರು ತನ್ನಿಬ್ಬರು ಮಕ್ಕಳೊಂದಿಗೆ ಕಣ್ಮರೆಯಾಗಿದ್ದು, ಇವರ ಪತ್ತೆಗೆ ಸಹಕರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಮೊಹಮದ್ ಜಾಫರ್ ಎಂಬುವವರ ಪತ್ನಿ ಉಮ್ಮೆ ಹನಿ (29 ವರ್ಷ), ಮಗಳು ಆಸ್ಪಿಯಾ ಕೌನೈನ್ (9)  ಹಾಗೂ ಮೊಹಮದ್ ಸೂಫಿಯಾನ್ (5) ನಾಪತ್ತೆಯಾದವರೆಂದು ಗುರುತಿಸಲಾಗಿದೆ. ನ. 20 ರಂದು ಮಹಿಳೆಯು ಇಬ್ಬರು ಮಕ್ಕಳೊಂದಿಗೆ ಮನೆಯಿಂದ ಹೋದವರು ಈವರೆಗೂ ವಾಪಸ್ಸು ಬಂದಿರುವುದಿಲ್ಲ.

ಮಹಿಳೆಯು 5.3 ಅಡಿ ಎತ್ತರ, ದೃಢವಾದ ಮೈಕಟ್ಟು, ಗೋಧಿ ಮೈಬಣ್ಣ, ದುಂಡನೆ ಮುಖ ಹೊಂದಿದ್ದು, ನೀಲಿ ಬಣ್ಣದ ಚೂಡಿದಾರ್ ಧರಿಸಿರುತ್ತಾರೆ.

ಆಸ್ಪಿಯಾ ಕೌನೈನ್ 4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡನೆ ಮುಖ ಹೊಂದಿದ್ದು, ಕ್ರೀಂ ಬಣ್ಣದ ಅಂಗಿ ಹಾಗೂ ಕಪ್ಪು ಬಣ್ಣದ ಸ್ಕರ್ಟ್ ಧರಿಸಿರುತ್ತಾಳೆ. 

ಮೊಹಮದ್ ಸೂಫಿಯಾನ್ 3.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡನೆ ಮುಖ ಹೊಂದಿದ್ದು, ಕ್ರೀಂ ಬಣ್ಣದ ಅಂಗಿ ಹಾಗೂ ಕಪ್ಪು ಬಣ್ಣದ ಚಡ್ಡಿ ಧರಿಸಿರುತ್ತಾನೆ.

ಕಾಣೆಯಾದ ವ್ಯಕ್ತಿಗಳ ಮಾಹಿತಿ ದೊರೆತಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಸಂಖ್ಯೆ : 08182-261414 / 9611761255 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *