shimoga news | ಶಿವಮೊಗ್ಗ : ಬೈಕ್ ಕಳ್ಳತನ ಪ್ರಕರಣ – ಓರ್ವನ ಬಂಧನ!

Shivamogga: Bike Theft Case – One Arrested! | Shivamogga, November 28: Police from the Doddapete station in Shivamogga have arrested an individual accused of stealing motorcycles and have recovered three bikes from his possession.

ಶಿವಮೊಗ್ಗ (shivamogga), ನವೆಂಬರ್ 28: ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪದ ಮೇರೆಗೆ ಓರ್ವನನ್ನು ಶಿವಮೊಗ್ಗದ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿ, ಆತನಿಂದ ಮೂರು ಬೈಕ್ ವಶಕ್ಕೆ ಪಡೆದ ಘಟನೆ ನಡೆದಿದೆ.

ಪಿಳ್ಳಂಗೆರೆ ಹೊಸಮನೆ ತಾಂಡಾದ ನಿವಾಸಿ ರಂಗನಾಥ್ ಆರ್ (33) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿಯು ವಿವಿಧೆಡೆ ಕಳವು ಮಾಡಿದ್ದ 1 ಫ್ಯಾಷನ್ ಪ್ಲಸ್ ಹಾಗೂ 2 ಸ್ಪ್ಲೆಂಡರ್ ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇವುಗಳ ಮೌಲ್ಯ 1,14,000 ರೂ.ಗಳಾಗಿದೆ.

ದೊಡ್ಡಪೇಟೆ ಠಾಣೆ ಇನ್ಸ್’ಪೆಕ್ಟರ್ ಸತ್ಯನಾರಾಯಣ್ ಮಾರ್ಗದರ್ಶನದಲ್ಲಿ ಕ್ರೈಂ ವಿಭಾಗದ ಸಬ್ ಇನ್ಸ್’ಪೆಕ್ಟರ್ ಮಂಜುನಾಥ, ಅಂಬಿಗೇರ್, ಎಎಸ್ಐ ನಾಗರಾಜ್ ಸಿ ಆರ್, ಸಿಬ್ಬಂದಿಗಳಾದ ಸಂದೀಪ ಎಸ್ ಡಿ, ಬಸವರಾಜ್ ಹೊರಗಿ, ಗುರುನಾಯ್ಕ, ಮನೋಹರ್, ಪುನೀತ್ ರಾವ್ ರವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಕಳವು : ದೊಡ್ಡಪೇಟೆ ಠಾಣೆ ವ್ಯಾಪ್ತಿಯ ನಿವಾಸಿ ಚಂದ್ರಶೇಖರ್ ಹೆಚ್ ಎಂಬುವರು 30-07-2026 ರಂದು ಮನೆಯ ಗೇಟಿನ ಮುಂದೆ ನಿಲ್ಲಿಸಿದ್ದ ಪ್ಯಾಷನ್ ಪ್ಲಸ್ ಬೈಕ್ ನ್ನು ಕಳ್ಳತನ ಮಾಡಲಾಗಿತ್ತು. ಈ ಕುರಿತಂತೆ ಅವರು ಪೊಲೀಸರಿಗೆ ದೂರು ನೀಡಿದ್ದರು.

ಸದರಿ ಪ್ರಕರಣದ ತನಿಖೆ ವೇಳೆ ಆರೋಪಿ ರಂಗನಾಥ್ ಆರ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ವಿಚಾರಣೆ ವೇಳೆ ಆರೋಪಿಯು ಇತರೆಡೆ ಬೈಕ್ ಕಳವು ಮಾಡಿದ್ದ ಕೃತ್ಯ ಬಾಯ್ಬಿಟ್ಟಿದ್ದ.

Shivamogga: Bike Theft Case – One Arrested! | Shivamogga, November 28: Police from the Doddapete station in Shivamogga have arrested an individual accused of stealing motorcycles and have recovered three bikes from his possession.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *