shimoga news | ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ‘ಶಿವಮೊಗ್ಗದ ಅಜ್ಜಯ್ಯ’ ಹೋರಿಯ ದುರಂತ ಅಂತ್ಯ!

The tragic end of ‘Shivamogga Ajjaya' bull that took part in the bull-taming contest! Shivamogga, November 29: In the bull-taming competition organized in Soraba taluk, the bull named‘Shivamogga Ajjaya' from Abbalagere, which is on the outskirts of Shivamogga city, A tragic incident occurred on November 29th where someone died while running in a competition. The said bull belonged to Varun Kumar. About 9 to 10 years old. The sudden death of the very attractive bull has caused immense grief among the owners and the bull fans of the said village.

ಶಿವಮೊಗ್ಗ (shivamogga), ನವೆಂಬರ್ 29: ಸೊರಬ ತಾಲೂಕಿನಲ್ಲಿ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ  ಶಿವಮೊಗ್ಗ ನಗರದ ಹೊರವಲಯ ಅಬ್ಬಲಗೆರೆಯ ‘ಶಿವಮೊಗ್ಗದ ಅಜ್ಜಯ್ಯ’’ ಎಂಬ ಹೆಸರಿನ ಹೋರಿಯು, ಸ್ಪರ್ಧೆಯಲ್ಲಿ ಓಡುವ ವೇಳೆಯೇ ಮೃತಪಟ್ಟ ದಾರುಣ ಘಟನೆ ನವೆಂಬರ್ 29 ರಂದು ನಡೆದಿದೆ.

ಸದರಿ ಹೋರಿ ವರುಣ್ ಕುಮಾರ್ ಎಂಬುವರಿಗೆ ಸೇರಿದ್ದಾಗಿದೆ. ಸುಮಾರು 9 ರಿಂದ 10 ವರ್ಷ ವಯೋಮಾನದ್ದಾಗಿದೆ. ಅತ್ಯಂತ ಆಕರ್ಷಕವಾಗಿದ್ದ ಹೋರಿಯ ದಿಡೀರ್ ಸಾವು, ಮಾಲೀಕರು ಹಾಗೂ ಸದರಿ ಗ್ರಾಮದ ಹೋರಿ ಅಭಿಮಾನಿಗಳಲ್ಲಿ ಅತೀವ ದುಃಖ ಉಂಟು ಮಾಡಿದೆ.

ಏನಾಯ್ತು?: ಸೊರಬ ತಾಲೂಕಿನ ಸಾಸರಹಳ್ಳಿ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಸದರಿ ಸ್ಪರ್ಧೆಯಲ್ಲಿ ‘ಶಿವಮೊಗ್ಗದ ಅಜ್ಜಯ್ಯ’ ಹೋರಿಯನ್ನು ಕೊಂಡೊಯ್ಯಲಾಗಿತ್ತು. ಸ್ಪರ್ಧೆಯಲ್ಲಿ ಹೋರಿಯನ್ನು ಬಿಟ್ಟ ವೇಳೆ, ವೇಗವಾಗಿ ಓಡುತ್ತಾ ಆಕಸ್ಮಿಕವಾಗಿ ರಸ್ತೆ ಬದಿಯ ಮರದ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಹೋರಿಯ ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವಾಹನವೊಂದರಲ್ಲಿ ಹೋರಿಯ ಕಳೇಬರವನ್ನು ಅಬ್ಬಲಗೆರೆ ಗ್ರಾಮಕ್ಕೆ ತರಲಾಗಿದೆ. ಮೆರವಣಿಗೆ ನಡೆಸಿ ಹೋರಿಯ ಅಂತ್ಯ ಸಂಸ್ಕಾರ ನಡೆಸಲು ಗ್ರಾಮಸ್ಥರು ಸಿದ್ದತೆ ಮಾಡಿಕೊಂಡಿದ್ದಾರೆ.

The tragic end of ‘Shivamogga Ajjaya’ bull that took part in the bull-taming contest! Shivamogga, November 29: In the bull-taming competition organized in Soraba taluk, the bull named‘Shivamogga Ajjaya’ from Abbalagere, which is on the outskirts of Shivamogga city, A tragic incident occurred on November 29th where someone died while running in a competition. The said bull belonged to Varun Kumar. About 9 to 10 years old. The sudden death of the very attractive bull has caused immense grief among the owners and the bull fans of the said village.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *