ಗೋವಾದ ಮಾಪುಸಾ ನಗರದಲ್ಲಿ ಗೋಬಿ ಮಂಚೂರಿ ತಯಾರಿಕೆ, ಮಾರಾಟ ನಿಷೇಧ!

Production sale of Gobi Manchurian banned in Mapusa Goa! ಗೋವಾದ ಮಾಪುಸಾ ನಗರದಲ್ಲಿ ಗೋಬಿಮಂಚೂರಿಯನ್ ತಯಾರಿಕೆ ಮಾರಾಟ ನಿಷೇಧ!

ಮಾಪುಸಾ (ಗೋವಾ), ಫೆ. 6: ಆಹಾರ ಖಾದ್ಯಗಳಲ್ಲಿ ಸಾಕಷ್ಟು ಜನಪ್ರಿಯತೆ ಸಂಪಾದಿಸಿರುವ, ತಿನಿಸು ಪ್ರಿಯರ ಅಚ್ಚುಮೆಚ್ಚಿನ ತಿಂಡಿಯಾದ ಗೋಬಿ ಮಂಚೂರಿಯನ್ (Gobi Manchurian) ತಯಾರಿಕೆ ಮತ್ತು ಮಾರಾಟ ನಿಷೇಧಿಸಿ, ಗೋವಾದ ಮಾಪುಸಾ ನಗರದ ಮುನ್ಸಿಪಲ್ ಕೌನ್ಸಿಲ್ (MMC) ಆದೇಶ ಹೊರಡಿಸಿದೆ.

ಅನೈರ್ಮಲ್ಯ ಸ್ಥಳಗಳಲ್ಲಿ ತಯಾರಿಕೆ, ಕೃತಕ ಬಣ್ಣಗಳ ಬಳಕೆ, ಬಟ್ಟೆ ತೊಳೆಯುವ ಪೌಡರ್  ಬಳಸಿ ತಯಾರಿಸಲಾದ ಸಾಸ್‌ಗಳ ಬಳಕೆ ಆರೋಪದ ಹಿನ್ನೆಲೆಯಲ್ಲಿ, ಗೋಬಿ ಮಂಚೂರಿಯನ್ ನಿಷೇಧಕ್ಕೆ ಮುಖ್ಯ ಕಾರಣವಾಗಿದೆ ಎಂದು ಹೇಳಲಾಗಿದೆ.

2022 ರಲ್ಲಿ, ಶ್ರೀ ದಾಮೋದರ್ ದೇವಸ್ಥಾನದಲ್ಲಿ ವಾಸ್ಕೋ ಸಪ್ತಾಹ ಮೇಳದ ಸಂದರ್ಭದಲ್ಲಿ, ಆಹಾರ ಮತ್ತು ಔಷಧಗಳ ಆಡಳಿತವು (ಎಫ್‌ಡಿಎ) ಮೊರ್ಮುಗಾವ್ ಮುನ್ಸಿಪಲ್ ಕೌನ್ಸಿಲ್‌ಗೆ ಗೋಬಿ ಮಂಚೂರಿಯನ್ ಮಾರಾಟ ಮಳಿಗೆಗಳನ್ನು ನಿರ್ಬಂಧಿಸಲು ಸೂಚನೆಗಳನ್ನು ನೀಡಿತ್ತು.

ಇದೀಗ ಬೋಡ್ಗೇಶ್ವರ್ ಜಾತ್ರೆಗೂ ಮುನ್ನ ಗೋಬಿ ಮಂಚೂರಿಯನ್ ಮಳಿಗೆಗಳನ್ನು ನಿರ್ಬಂಧಿಸುವ ಆದೇಶವನ್ನು ಮಾಪುಸಾ ನಗರದ ಮುನ್ಸಿಪಲ್ ಕೌನ್ಸಿಲ್ ಕೈಗೊಂಡಿದೆ.

ಅನೈರ್ಮಲ್ಯ ಸ್ಥಳಗಳಲ್ಲಿ ತಯಾರಿಕೆ, ಕೃತಕ ಬಣ್ಣಗಳ ಬಳಕೆ, ಬಟ್ಟೆ ತೊಳೆಯುವ ಪೌಡರ್  ಬಳಸಿ ತಯಾರಿಸಲಾದ ಸಾಸ್‌ಗಳಿಂದ ಮಾಡಿದ ಗೋಬಿ ಮಂಚೂರಿಯನ್ ಸೇವಿಸುವ ನಾಗರೀಕರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಮಾಪುಸಾ ಮುನ್ಸಿಪಲ್ ಕೌನ್ಸಿಲ್ ಅಭಿಪ್ರಾಯವಾಗಿದೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *