ಶಿವಮೊಗ್ಗ (shivamogga), ಅಕ್ಟೋಬರ್ 16 : ಶಿವಮೊಗ್ಗ ನಗರದ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-1 ರಿಂದ 4 ರಲ್ಲಿ, ಅಕ್ಟೋಬರ್ 18 ರಂದು ಮೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 18 ರ ಬೆಳಿಗ್ಗೆ 09 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ಕೆಳಕಂಡ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ.
ವಿವರ : ಎಸ್.ವಿ. ಬಡಾವಣೆ, ಗಾಡಿಕೊಪ್ಪ, ನಂಜಪ್ಪ ಹೆಲ್ತ್ ಕೇರ್, ಶರಾವತಿ ದಂತ ವೈದ್ಯಕೀಯ ಕಾಲೇಜು, ಮಲ್ಲಿಗೇನಹಳ್ಳಿ, ಸೋಮಿನಕೊಪ್ಪ ಪ್ರೆಸ್ ಕಾಲೋನಿ, ಸೋಮಿನಕೊಪ್ಪ,
ಗಾಯತ್ರಿ ಲೇಔಟ್, ಮಲ್ಲಿಗೇನಹಳ್ಳಿ, ತ್ಯಾವರೆಕೊಪ್ಪ, ಮುದ್ದಿನಕೊಪ್ಪ, ಕೋಟೆಗಂಗೂರು, ಗುಡ್ಡದಾರೆ ಕೇರೆ, ಜಕಾತಿಕೊಪ್ಪ, ಪೆಸಿಟ್ ಕಾಲೇಜ್, ಭೂಮಿಕಾ ಅಲಾಯ್ಸ್, ಸಿದ್ಲಿಪುರ,
ಆಲದೇವರ ಹೊಸೂರು, ವಿರುಪಿನಕೊಪ್ಪ, ಗಿರಿದೀಪಂ, ಶಾಲೆ, ಲಯನ್ ಸಫಾರಿ, ಭೋವಿ ಕಾಲೋನಿ, ಸಾಗರ ಮುಖ್ಯರಸ್ತೆ, ಆಲ್ಕೋಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ಕೋರಿದೆ.
Power Interruption in Areas Surrounding Gadikoppa – Sominkoppa – Malligenahalli and Koteganguru in Shivamogga City on October 18 | Shivamogga, October 16: MESCOM has scheduled urgent maintenance work for October 18 on Feeders AF-1 through AF-4 which are supplied by the Alkola Power Distribution Center in Shivamogga city.

