ಶಿವಮೊಗ್ಗ (shivamogga), ಅಕ್ಟೋಬರ್ 16: ಶಿವಮೊಗ್ಗ ತಾಲೂಕಿನ ತ್ಯಾಜವಳ್ಳಿ ಗ್ರಾಮದಲ್ಲಿ ಕಂಠೀರಣ ಸ್ಟುಡಿಯೋ ಹಾಗೂ ಕಿರು ಫಿಲಂ ಸಿಟಿ ನಿರ್ಮಾಣದ ಕುರಿತಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಕ್ಟೋಬರ್ 16 ರಂದು ಸಭೆ ನಡೆಯಿತು.
ಕಂಠೀರವ ಸ್ಟುಡಿಯೋದ ಅಧ್ಯಕ್ಷರಾದ ಮೆಹಬೂಬ್ ಪಾಷ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸದರಿ ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ತಹಶೀಲ್ದಾರ್ ರಾಜೀವ್ ಹಾಗೂ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಮಾರುತಿ ಉಪಸ್ಥಿತರಿದ್ದರು.
ಭೂಮಿ ಮಂಜೂರು : ಕಂಠೀರವ ಸ್ಟುಡಿಯೋ ಹಾಗೂ ಕಿರು ಫಿಲಂ ಸಿಟಿ ನಿರ್ಮಾಣಕ್ಕೆ ಕನಿಷ್ಠ 25 ಎಕರೆ ಹಾಗೂ ಗರಿಷ್ಠ ಪ್ರಮಾಣದಲ್ಲಿ ಲಭ್ಯವಿರುವ ಸರ್ಕಾರಿ ಜಮೀನು ಮಂಜೂರು ಮಾಡುವ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಗಿದೆ.
ಗರಿಷ್ಠ ಪ್ರಮಾಣದ ಭೂಮಿ ಒದಗಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು. ಈ ಕುರಿತಂತೆ ಮುಂದಿನ ಒಂದು ವಾರದೊಳಗೆ ಸಮಗ್ರ ಪರಿಶೀಲನಾ ವರದಿ ಹಾಗೂ ಅದಿಕೃತ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದ್ದಾರೆ.
Construction of Kanteerava Studio and Film City in Tyajavalli Shivamogga: Significant Discussion! | Shivamogga, October 16: A meeting was held at the Deputy Commissioner’s office on October 16 regarding the construction of Kanteerava Studio and a mini Film City in Tyajavalli village Shivamogga taluk.

