shimoga news | ಶಿವಮೊಗ್ಗದ ಕೋಟೆಗಂಗೂರು ರೈಲ್ವೆ ಹಳಿ ಮೇಲೆ ಹಲ್ಲೆಗೀಡಾದ ಯುವಕ ಪತ್ತೆ – ಆಸ್ಪತ್ರೆಗೆ ದಾಖಲು!

Shimoga–Sringeri–Mangalore Railway Line: Is Implementation Easy? 332 ಕಿ.ಮೀ. ಉದ್ದ - 3300 ಕೋಟಿ ರೂ. ವೆಚ್ಚದ ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಮಾರ್ಗ ಅನುಷ್ಠಾನ ಸುಲಭ ಸಾಧ್ಯವೇ?

ಶಿವಮೊಗ್ಗ (shivamogga), ಅಕ್ಟೋಬರ್ 20: ಶಿವಮೊಗ್ಗ ನಗರದ ಹೊರವಲಯ ಕೋಟೆಗಂಗೂರು ರೈಲ್ವೆ ನಿಲ್ದಾಣದ ಕೋಚಿಂಗ್ ಡಿಪೋ ಸಮೀಪದ ರೈಲ್ವೆ ಹಳಿ ಮೇಲೆ, ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಯುವಕನೋರ್ವ ಪತ್ತೆಯಾಗಿರುವ ಘಟನೆ ಅಕ್ಟೋಬರ್ 21 ರ ಬೆಳಿಗ್ಗೆ ನಡೆದಿದೆ.

ಕೋಟೆಗಂಗೂರು ಮೂಲದ ಆನಂದ್ ಗಾಯಗೊಂಡ ಯುವಕ ಎಂದು ಗುರುತಿಸಲಾಗಿದೆ. ಈತನನ್ನು ಸಾರ್ವಜನಿಕರು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕನ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹಲ್ಲೆಗೀಡಾದ ಯುವಕನು ಶಾಮಿಯಾನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ನಿನ್ನೆ ರಾತ್ರಿ ಮನೆಯಿಂದ ಹೊರಹೋಗಿದ್ದ. ನಂತರ ಹಿಂದಿರುಗಿರಲಿಲ್ಲ ಎಂದು ಹೇಳಲಾಗಿದೆ.

ಯುವಕನ ಮೇಲೆ ಹಲ್ಲೆ ನಡೆಸಿ, ನಂತರ ಹಳಿಗಳ ಮೇಲೆ ಆತನನ್ನು ಎಸೆದು ಹೋಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಪ್ರಕರಣದ ಕುರಿತಂತೆ ಇನ್ನಷ್ಟೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.

ಘಟನಾ ಸ್ಥಳಕ್ಕೆ ರೈಲ್ವೆ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ಧಾರೆ. ಇನ್ನಷ್ಟೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.

Young Man Found Assaulted on Railway Tracks at Koteganguru, Shivamogga – Admitted to Hospital! | Shivamogga, October 20: On the morning of October 21 a young man was discovered in a severely injured state on the railway tracks near the coaching depot at the Koteganguru railway station located on the outskirts of Shivamogga city.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *