ಬಾಲಸೋರ್ (ಒರಿಸ್ಸಾ): ದೇಶದ ರೈಲ್ವೆ ಇತಿಹಾಸದಲ್ಲಿಯೇ ಭೀಕರ ಅಪಘಾತಗಳಲ್ಲಿ ಒಂದಾದ, ಒಡಿಶಾ ರಾಜ್ಯದ ಬಾಲಸೋರ್ ನ ಬಹನಾಗಾ ಬಜಾರ್ ರೈಲ್ವೆ ನಿಲ್ದಾಣದಲ್ಲಿ ಜೂ. 2 ರ ರಾತ್ರಿ ನಡೆದ ಮೂರು ರೈಲುಗಳ ಅವಘಡ, ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ! ಈ ಘನಘೋರ ದುರಂತದಲ್ಲಿಇಲ್ಲಿಯವರೆಗೂ 261 ಕ್ಕೂ ಅಧಿಕ ಪ್ರಯಾಣಿಕರು ಮೃತಪಟ್ಟಿರುವ ವರದಿಗಳು ಬಂದಿವೆ. ಜೊತೆಗೆ ಸುಮಾರು 900 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಸಾವು-ನೋವಿನ ಅಧಿಕೃತ ವರದಿಗಳು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.

ಒರಿಸ್ಸಾ : ಭೀಕರ ರೈಲು ದುರಂತ – ಏರುತ್ತಿದೆ ಸಾವಿನ ಸಂಖ್ಯೆ!

ಬಾಲಸೋರ್ (ಒರಿಸ್ಸಾ): ದೇಶದ ರೈಲ್ವೆ ಇತಿಹಾಸದಲ್ಲಿಯೇ ಭೀಕರ ಅಪಘಾತಗಳಲ್ಲಿ ಒಂದಾದ, ಒಡಿಶಾ ರಾಜ್ಯದ ಬಾಲಸೋರ್ ನ ಬಹನಾಗಾ ಬಜಾರ್ ರೈಲ್ವೆ ನಿಲ್ದಾಣದಲ್ಲಿ ಜೂ. 2 ರ ರಾತ್ರಿ ನಡೆದ ಮೂರು ರೈಲುಗಳ ಅವಘಡ, ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ!

ಈ ಘನಘೋರ ದುರಂತದಲ್ಲಿ ಇಲ್ಲಿಯವರೆಗೂ 261 ಕ್ಕೂ ಅಧಿಕ ಪ್ರಯಾಣಿಕರು ಮೃತಪಟ್ಟಿರುವ ವರದಿಗಳು ಬಂದಿವೆ. ಜೊತೆಗೆ ಸುಮಾರು 900 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.  ಸಾವು-ನೋವಿನ ಅಧಿಕೃತ ವರದಿಗಳು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.

ಗಾಯಾಳುಗಳನ್ನು ಬಾಲಸೋರ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ಪ್ರಯಾಣಿಕರ ಸ್ಥಿತಿ ಗಂಭೀರ ಸ್ವರೂಪದಲ್ಲಿದೆ. ಮತ್ತೊಂದೆಡೆ, ಅವಘಡ ಸಂಭವಿಸಿದ ಸ್ಥಳದಲ್ಲಿ ನಡೆಸಲಾಗುತ್ತಿದ್ದ ರಕ್ಷಣಾ ಕಾರ್ಯಾಚರಣೆ ಅಂತ್ಯಗೊಂಡಿದೆ. ವಿವಿಧ ಘಟಕಗಳ ನೂರಾರು ರಕ್ಷಣಾ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಒರಿಸ್ಸಾ : ಭೀಕರ ರೈಲು ದುರಂತ – ಏರುತ್ತಿದೆ ಸಾವಿನ ಸಂಖ್ಯೆ! Read More